Breaking News

ರಜೆಗೆ ಬಂದಿದ್ದ ಯೋಧನನ್ನು ಕೊಂದಿದ್ದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

Spread the love

ಬೆಳಗಾವಿ: ರಜೆಗೆ ಬಂದಿದ್ದ ಯೋಧನನ್ನು ಕೊಂದಿದ್ದ ಪಾಪಿ ತಂದೆಗೆ ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಕೋರ್ಟ್ ಇಂದು ಜೀವಾವಧಿ ಶಿಕ್ಷೆಯ ಜೊತೆಗೆ ಮೂರು ಸಾವಿರ ರೂ. ದಂಡ ವಿಧಿಸಿದೆ. 2016ರ ಡಿಸೆಂಬರ್ 12ರಂದು ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಮಗ ಈರಣ್ಣ ಹತ್ಯೆಗೈದಿದ್ದ ತಂದೆ ವಿಠ್ಠಲ್ ಇಂಡಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹಣಕಾಸಿನ ವ್ಯವಹಾರ ಸಂಬಂಧ ತಂದೆ ಮಗನ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ವಿಠ್ಠಲ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಮಗನ ಹತ್ಯೆಗೈದಿದ್ದ. ವಿಠ್ಠಲ್ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಪ್ರಕರಣದ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ನೈಋತ್ಯ ರೈಲ್ವೆಗೆ ಸೆಪ್ಟೆಂಬರ್​ನಲ್ಲಿ ಭರ್ಜರಿ ಆದಾಯ: ಸರಕು ಸಾಗಣೆಯಿಂದ ₹427, ಪ್ರಯಾಣಿಕರಿಂದ ₹282 ಕೋಟಿ ಗಳಿಕೆ

Spread the love ಹುಬ್ಬಳ್ಳಿ: ಸೆ. 2025ರಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ