Breaking News

ಪೊಲೀಸರ ವೇಷ ಧರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸೆರೆ

Spread the love

ನವದೆಹಲಿ, ನ.11- ಪೊಲೀಸರ ವೇಷ ಧರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಸುಲಿಗೆಕೋರರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಕಿ (40) , ರಾಹುಲ್ ಕುಮಾರ್ (29), ಅಲೀಕ್ ಅಬ್ರಹಾಂ (37) ಮತ್ತು ರಾಹುಲ್ (27) ಬಂಧಿತ ಸುಲಿಗೆಕೋರರು.

ಹೆದ್ದಾರಿಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ವಾಹನಗಳಿಗೆ ಕಾಯುವಂತಹ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಈ ತಂಡ ರಾಷ್ಟ್ರ ರಾಜಧಾನಿ ಜನರಿಗೆ ಆತಂಕಕಾರಿಯಾಗಿ ಪರಿಣಮಿಸಿತ್ತು.

ಪೊಲೀಸ್ ಅಧಿಕಾರಿಗಳು ಇಲ್ಲವೆ ಕಾನೂನು ಪಾಲನಾ ಅಧಿಕಾರಿಗಳ ವೇಷ ತೊಟ್ಟು ಬಸ್‍ಗಾಗಿ ಕಾಯುವ ಪ್ರಯಾಣಿಕರಿಗೆ ಡ್ರಾಪ್ ನೀಡುವ ನೆಪದಲ್ಲಿ ಕರೆದೊಯ್ದು ಚಿನ್ನಾಭರಣ , ನಗದು ದೋಚಿ ಪರಾರಿಯಾಗುತ್ತಿದ್ದರು. ನಾವು ಪೊಲೀಸಿನವರು. ಕಳ್ಳರ ಕಾಟ ಹೆಚ್ಚಾಗಿದೆ.

ನಿಮ್ಮಲ್ಲಿರುವ ನಗದು ಮತ್ತು ಚಿನ್ನಾಭರಣವನ್ನು ಕವರಿನಲ್ಲಿ ಹಾಕಿ ಎಂದು ನಂಬಿಸಿ ಅದನ್ನು ಪಡೆದುಕೊಂಡು ಅದೇ ಮಾದರಿಯ ಬೇರೆ ಕವರನ್ನು ಪ್ರಯಾಣಿಕರಿಗೆ ನೀಡಿ ಸುಲಿಗೆ ಮಾಡುತ್ತಿದ್ದರು. ಜನರಿಗೆ ಕಂಟಕ ಪ್ರಾಯರಾಗಿದ್ದ ಸುಲಿಗೆಕೋರರನ್ನು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಅತುಲ್‍ಕುಮಾರ್ ಠಾಕೂರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ