ಬೆಂಗಳೂರು: ಕೆಲವೇ ಕೆಲವು ದಿನಗಳ ಹಿಂದಕ್ಕೆ ಹೋದರೆ.. ಅಂದ್ರೆ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಘೋಷಣೆಯಾದಾಗ, ಕಾಂಗ್ರೆಸ್ ಪಕ್ಷ ಇನ್ನೂ ಕುಸುಮಗೆ ಟಿಕೆಟ್ ಕೊಟ್ಟಿರಲಿಲ್ಲ. ರಾಜಕೀಯಕ್ಕೆ ಕುಸುಮ ಇಳಿಯುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೆ ಮಾಧ್ಯಮದ ಮುಂದೆ ಡಿ.ಕೆ.ರವಿ ತಾಯಿ ಕಿಡಿಕಾರಿದ್ದರು.ಮಗ ಸಾವನ್ನಪ್ಪಿದಾಗ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ.
ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಲು. ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು ಫೋಟೋ ಹಾಕಬಾರದು. ಒಂದು ವೇಳೆ ಹಾಕಿದರೆ, ನಾನೇ ಬಂದು ಬೆಂಕಿ ಹಚ್ತೀನಿ” ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಇದೇ ಗೌರಮ್ಮ ತಮ್ಮ ಸೊಸೆ ಕುಸುಮ ಬೆಂಬಲಕ್ಕೆ ನಿಂತಿದ್ದಾರೆ. ”ನನ್ನ ಮಗನ ಬಗ್ಗೆ, ನನ್ನ ಸೊಸೆ ಬಗ್ಗೆ ಕೋಪದಲ್ಲಿ ಬೈದರೂ, ಇನ್ನೊಂದು ಕಡೆ ಮರುಗುತ್ತೇನೆ. ಹೆತ್ತ ತಾಯಿ ಮಗನನ್ನು ಕಳೆದುಕೊಂಡೆ. ಸೊಸೆ ಚೆನ್ನಾಗಿರಲಿ ಎಂದು ಭಾವಿಸುತ್ತೇನೆ. ಆಕೆ ಕಣ್ಣಲ್ಲಿ ನೀರು ಹಾಕುವುದನ್ನು ನೋಡಿ ವಾರದಿಂದ ನನಗೆ ಸಂಕಟ ಆಯ್ತು. ಅವಳು ಗೆದ್ದು ಮುಂದೆ ಬಂದರೆ, ನಾನೇ ಮುಂದೆ ನಿಂತುಕೊಂಡು ಕೆಲಸ ಮಾಡಿಸ್ತೀನಿ. ನನ್ನ ಮಗನ ತರಹ ಅವಳು ಕೆಲಸ ಮಾಡಬೇಕು” ಎಂದು ಮೀಡಿಯಾ ಮುಂದೆ ಗೌರಮ್ಮ ಹೇಳಿದ್ದಾರೆ.
ಅವತ್ತು ಏನೋ ಹೊಟ್ಟೆ ಉರಿಯಲ್ಲಿ ಎರಡು ಮಾತು ಆಡಿದ್ದೆ. ಇವತ್ತು ಆಕೆ ಕಣ್ಣಲ್ಲಿ ನೀರು ಹಾಕ್ತಿದ್ದಾಳೆ. ಆಕೆಯನ್ನ ನೋಡಿ ನನಗೆ ಸಂಕಟ ಆಗುತ್ತಿದೆ. ಅವಳು ಗೆದ್ದರೆ, ಅವಳ ಜೊತೆಗೆ ನಾನೂ ನಿಲ್ಲುತ್ತೇನೆ” ಎಂದಿದ್ದಾರೆ ಗೌರಮ್ಮ.
ಅಂತೂ ಸೊಸೆಯ ಬೆಂಬಲಕ್ಕೆ ಗೌರಮ್ಮ ಬಂದು ನಿಂತಿದ್ದಾರೆ. ಈಗ ಕುಸುಮ ರನ್ನ ಗೆಲ್ಲಿಸುವುದು, ಬಿಡುವುದು ಆರ್.ಆರ್.ನಗರದ ಜನತೆ ಕೈಯಲ್ಲಿದೆ.
Laxmi News 24×7