ಬೆಳಗಾವಿ: ಪೊಲೀಸರ ಕಣ್ಣುತಪ್ಪಿಸಿ ಎನ್‌ಸಿಪಿ ಮಹಿಳಾ ಘಟಕದ ರೂಪಾಲಿ ಚಾಕನಕರ ಬೆಳಗಾವಿಗೆ ಆಗಮಿಸಿ ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ. ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ. ಪೊಲೀಸರು ತಡೆಯೊಡ್ಡುತ್ತಾರೆಂದು ಗೊತ್ತಿದ್ದರೂ ಅವರ ಕಣ್ತಪ್ಪಿಸಿ ಸಭೆಗೆ ಬಂದಿದ್ದೇನೆ. ಗಡಿಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಹಾಗೂ ಬೀದರ್ ಜಿಲ್ಲೆಯ ಕೆಲವು ಪ್ರದೇಶಗಳು ಮಹರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಿಕೆ ನೀಡಿದ್ದಾರೆ.