ಮುಂಬೈ : ಮಾದಕವಸ್ತುಗಳ ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಮಾದಕವಸ್ತುವನ್ನು ಖರೀದಿಸುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ಪ್ರೀತಿಕಾ ಚೌವ್ಹಾಣ್ ರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಇನ್ನು, ಬಂಧಿತ ಆರೋಪಿಯನ್ನು ಅಧಿಕಾರಿಗಳು ಕಿಲ್ಲೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಟಿಯು ಸಾವಧಾನ್ ಇಂಡಿಯಾ, ದೇವೋ ಕಿ ದೇವ್ ಮಹಾದೇವ್ ಸೇರಿದಂತೆ ಕೆಲವು ಹಿಂದಿ ಧಾರಾವಾಹಿಗಳನ್ನಿ ನಟಿಸುತ್ತಿದ್ದರು ಎಂದು ತಿಳಿದು ಬಂದಿದೆ.
Laxmi News 24×7