Breaking News

ಎಚ್ಚರಿಕೆ ಹಾಗೂ ಸುರಕ್ಷತೆಯಿಂದ ಹಬ್ಬಗಳನ್ನು ಆಚರಿಸುವಂತೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

Spread the love

ಕಲ್ಲೋಳಿ : ಹಬ್ಬಗಳ ಆಚರಣೆಯ ಸಂಭ್ರಮದಲ್ಲಿ ಮೈ ಮರೆಯದೇ ಎಚ್ಚರಿಕೆ ಹಾಗೂ ಸುರಕ್ಷತೆಯಿಂದ ಹಬ್ಬಗಳನ್ನು ಆಚರಿಸುವಂತೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜನತೆ ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರು ಹೇಳಿದಂತೆ ಅಗತ್ಯ ಅರೋಗ್ಯ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ನೈರ್ಮಲ್ಯ ಕಾಪಾಡಿ ಹಾಗೂ ಸಾಮಾಜಿಕ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿ ನವರಾತ್ರಿ ಮತ್ತು ದಸರಾ, ವಿಜಯ ದಶಮಿ ಹಬ್ಬಗಳನ್ನು ಆಚರಣೆ ಮಾಡುವಂತೆ ಹೇಳಿದ್ದಾರೆ.

ಕೋವಿಡ್ ಸೋಂಕು ತಡೆಗೆ ಲಸಿಕೆಯನ್ನು ಹೊಂದುವ ಹಾಗೂ ಜನರಿಗೆ ವಿತರಿಸುವ  ಬಗ್ಗೆ ಪ್ರಧಾನಿ ಮೋದಿಯವರು  ವಿಶ್ವಾಸದ ಮಾತುಗಳನ್ನು ಹೇಳಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಕರ್ನಾಟಕ ರಾಜ್ಯದ ಹಲವು ವಿಜ್ಞಾನಿಗಳೂ ಕೂಡಾ ಇದರಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.


Spread the love

About Laxminews 24x7

Check Also

ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು

Spread the loveಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ