Breaking News

ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ.

Spread the love

ಬೆಂಗಳೂರು: ಇತ್ತೀಚೆಗಷ್ಟೇ ಚಾಕು ಹಿಡಿದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಇಬ್ಬರ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸದ್ಯ ವೈರಲ್ ಆಗಿರೋ ವಿಡಿಯೋ ನೋಡ್ತಿದ್ರೆ ನಿಜಕ್ಕೂ ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ.

ಕೈಯಲ್ಲಿ ಡ್ಯಾಗರ್ ಹಿಡಿದು ಡರೋಡೆಗೆ ಸ್ಕೆಚ್!
ಯೆಸ್.. ಸಿಟಿ ಮಾರ್ಕೆಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಲೈವ್ ರಾಬರಿಯ ನಡೆದಿದೆ.. ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇಬ್ಬರು ಖದೀಮರು ದರೋಡೆ ಮಾಡಿರೋ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸ್ತಿದೆ. ದಾರಿಯಲ್ಲಿ ಬರೋರನ್ನ ಬೆದರಿಸಿ ಹಣ, ಮೊಬೈಲ್‌ ಕಸಿದುಕೊಳ್ಳುತ್ತಿರೋ ದೃಶ್ಯ ವೈರಲ್ ಆಗಿದೆ.

ಮುಖ ಮುಚ್ಕೊಂಡ್, ಜಾಕೆಟ್ ಹಾಕಿಕೊಂಡಿರೋ ಈ ಇಬ್ಬರು ಖದೀಮರು ಹಾಡಹಗಲೇ ರಾಬರಿ ಮಾಡ್ತಿದ್ದಾರೆ.

ಕ್ಯಾಂಟರ್‌ ಪಕ್ಕದಲ್ಲಿ ಹೋಗ್ತಿದ್ದ ಯುಕನನ್ನ ಹಿಂದಿನಿಂದ ತಡೆದು ಡ್ಯಾಗರ್‌ ತೋರಿಸ್ತಾನೆ.. ಅಷ್ಟರಲ್ಲೇ ಎಚ್ಚೆತ್ತ ಯುವಕ ಕಿರುಚಿಕೊಂಡು ಎಸ್ಕೇಪ್‌ ಆಗಿಬಿಡ್ತಾನೆ. ಅಷ್ಟೇ ಅಲ್ಲ, ಮತ್ತೊಬ್ಬನ ಮೇಲೆ ಅಟ್ಯಾಕ್‌ ಮಾಡಿದ ಈ ಖದೀಮರು ಆತನ ಬಳಿಯಿದ್ದ ಪರ್ಸ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯವನ್ನ ಕ್ಯಾಂಟರ್‌ ವಾಹನದಲ್ಲಿ ಕುಳಿತ್ತಿದ್ದ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.

ಅಷ್ಟಕ್ಕೂ ಇದು ಇತ್ತೀಚೆಗೆ ನಡೆದಿರೋ ಕೃತ್ಯವಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ನಡೆದಿರೋ ಘಟನೆ ಎನ್ನಲಾಗ್ತಿದೆ. ಆದ್ರೆ ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್‌ ಎಂ ಪಾಟೀಲ್‌ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜತೆಗೆ ವೈರಲ್ ವಿಡಿಯೋದಲ್ಲಿರೋ ಖದೀಮರಿಗಾಗಿ ಬಲೆಬಿಸಿದ್ದು, ತನಿಖೆಗೆ ತಂಡವನ್ನ ರಚನೆ ಮಾಡಲಾಗಿದೆ. ಅಷ್ಟೇ ಅಲ್ಲ ಇಂಥಾ ಘಟನೆ ನಡೆದ್ರೆ ಕೂಡಲೇ ಹತ್ತಿರದ ಠಾಣೆಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.

ಒಟ್ನಲ್ಲಿ ಹಳೆಯದ್ದೋ ಹೊಸತೋ ವೈರಲ್ ಆಗಿರೋ ವಿಡಿಯೋ ಅಕ್ಷರಶಃ ಭಯ ಹುಟ್ಟಿಸುವಂತಿದ್ದು, ಆದಷ್ಟು ಬೇಗ ಸೂಕ್ತ ತನಿಖೆ ನಡೆದು ಆರೋಪಿಗಳಿಗೆ ತಕ್ಕ ಶಾಸ್ತಿಯಾಗಬೇಕಿದೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ