ಸಾಮಾನ್ಯವಾಗಿ ಜೆಸಿಬಿಯನ್ನು ಮಣ್ಣು ಅಗೆಯಲು ಬಳಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೇ ಜೆಸಿಬಿಯಲ್ಲಿ ತನ್ನ ಬೆನ್ನು ಉಜ್ಜಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಾಗಿದ್ದಾರೆ.
ಹೌದು. ಈ ವಿಚಾರ ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಯಾಕಂದ್ರೆ ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕೂಡ ವೈರಲ್ ಆಗುತ್ತಿದೆ. 41 ಸೆಕೆಂಡಿನ ವೀಡಿಯೋವನನ್ನು ಅಬ್ದುಲ್ ನಝಾರ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಅಲ್ಲದೆ ಸಾಕಷ್ಟು ತಮಾಷೆಯ ಕಾಮೆಂಟ್‍ಗಳು ಬಂದಿವೆ.
ವೀಡಿಯೋದಲ್ಲಿ ಕನ್ಸ್ಟ್ರಕ್ಷನ್ ನಡೆಯೋ ಸ್ಥಳದಲ್ಲಿರುವ ವ್ಯಕ್ತಿ ಮೊದಲು ತನ್ನ ಟವಲ್ ನಿಂದ ಬೆನ್ನು ಉಜ್ಜಿಕೊಂಡಿದ್ದಾರೆ. ಆದರೆ ಅದರಿಂದ ಅವರಿಗೆ ತೃಪ್ತಿ ಸಿಕ್ಕಿಲ್ಲ. ಹೀಗಾಗಿ ಜೆಸಿಬಿ ಬಳಿ ಹೋಗಿ ಅದರ ಬಕೆಟ್ ಮುಂದೆ ಬಾಗಿ ನಿಲ್ಲುತ್ತಾರೆ. ಈ ವೇಳೆ ಜೆಸಿಬಿ ಚಾಲಕ ಅದರ ಬಕೆಟ್‍ನಿಂದ ವ್ಯಕ್ತಿಯ ಬೆನ್ನನ್ನು ಉಜ್ಜುತ್ತಾರೆ. ಇದರಿಂದ ವ್ಯಕ್ತಿಗೆ ಸಮಾಧಾನವಾದಂತೆ ತೋರುತ್ತಿದೆ. ಆದರೆ ಈ ಘಟನೆ ಎಲಿ ನಡೆದಿದೆ ಎಂಬುದ ಬಗ್ಗೆ ಮಾಹಿತಿ ಇಲ್ಲ.
ಈ ಎಲ್ಲಾ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವ್ಯಕ್ತಿಯ ಈ ಕೆಲಸಕ್ಕೆ ನೆಟ್ಟಿಗರು ಇದೊಂದು ಬೇಜವಾಬ್ದಾರಿತನ ಎಂದು ಕಿಡಿಕಾರಿದ್ದಾರೆ. ವೀಡಿಯೋ ಫೇಸ್‍ಬುಕ್ ನಲ್ಲಿ ಶೇರ್ ಆಗುತ್ತಿದ್ದಂತೆಯೇ ಇದುವರೆಗೆ ಸುಮಾರು 3.4 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದೆ. ಅಲ್ಲದೆ 2.3 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
ಈ ಹಿಂದೆ ಅಂದರೆ ಕಳೆದ ಜುಲೈ ತಿಂಗಳಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದನೆಂದು ಸಿಟ್ಟುಗೊಂಡ ಚಾಲಕನ ಜೆಸಿಬಿ ಬಕೆಟ್ ನಿಂದ ಆತನ ತಲೆಗೆ ಬಡದ ಘಟನೆಯೊಂದು ನಡೆದಿತ್ತು. ಪರಿನಾಂ ವ್ಯಕ್ತಿಯ ತಲೆಗೆ ಗಾಯಗಳಾಗಿತ್ತು. ಈ ಸಂಬಂಧ ಜೆಸಿಬಿ ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.