Breaking News

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

Spread the love

ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್​ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ.

ಚಿನ್ನಾರಿ.. ನರ್ಸ್​​
ಆಸ್ಪತ್ರೆಯೊಂದರಲ್ಲಿ ನರ್ಸ್​​ ಆಗಿದ್ದ ಚಿನ್ನಾರಿ ಎಂಬ ಯುವತಿಗೆ‌ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡಿಸಿದ್ದರು, ಯುವತಿ ಹಾಗೂ ಯುವಕನನ್ನು ಠಾಣೆಗೆ ಕರೆಯಿಸಿ ಪಂಚಾಯ್ತಿ ಮಾಡಿ ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದಾದ ನಂತರ ಸಹ ಯುವಕ ನಾಗಭೂಷಣ್​ನ ಕಿರುಕುಳ ಕಡಿಮೆಯಾಗಿರಲಿಲ್ಲ.

ಯುವತಿ ಸಜೀವ ದಹನ; ಪಾಗಲ್ ಪ್ರೇಮಿಯ ಸ್ಥಿತಿ ಗಂಭೀರ
ಅಕ್ಟೋಬರ್ 12ರ ರಾತ್ರಿ ಈ ಪಾಗಲ್ ಪ್ರೇಮಿ ಯುವತಿಯ ಜೊತೆ ಮಾತಾಡಬೇಕೆಂದು ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿ‌ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ, ಜೊತೆಯಲ್ಲೇ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಧಿಡೀರನೆ ಹೊತ್ತಿಕೊಂಡಿದೆ.

ಅಗ್ನಿ ಸ್ಪರ್ಶವಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಹಾಗೂ ಯವಕನಿಗೂ ಸಹ ಸುಟ್ಟ ಗಾಯಗಳಾಗಿದ್ದು, ಗುಂಟೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಗಲ್ ಪ್ರೇಮಿಯ ಸ್ಥಿತಿ ಗಂಭೀರವಾಗಿದೆ. ವಿಜಯವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಸಮರ್ಪಣೆ

Spread the loveಉಡುಪಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ