Breaking News

ಚಾಲಕ ಉದ್ಧಟತನ ಪ್ರದರ್ಶಿಸಿರುವ ಘಟನೆ

Spread the love

ಧಾರವಾಡ: ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಬಸ್​ ಚಲಾಯಿಸಿ ಚಾಲಕ ಉದ್ಧಟತನ ಪ್ರದರ್ಶಿಸಿರುವ ಘಟನೆ ಇನಾಮಹೊಂಗಲ ಮತ್ತು ಹಾರೊಬೆಳವಡಿ ಗ್ರಾಮದ ಮಧ್ಯ ಇರುವ ತಾತ್ಕಾಲಿಕ ಸೇತುವೆ ಬಳಿ ನಡೆದಿದೆ.

ನಿನ್ನೆ ರಾತ್ರಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಮಳೆಯಾದ ಹಿನ್ನೆಲೆ ನದಿ- ಹಳ್ಳಕೊಳ್ಳಗಳು ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇಂದು ಬೆಳಗ್ಗೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಚಾಲಕ ನೀರು ಹರಿಯುತ್ತಿರುವ ಸೇತುವೆ ಮೇಲೆಯೇ ಬಸ್​ ಚಲಾಯಿಸಿದ್ದಾನೆ. ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ಬಸ್ ನಡು​ ನೀರಿನಲ್ಲಿ ಸ್ಥಗಿತಗೊಂಡಿದ್ದು, ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು.

ಇನ್ನು ಈ ದೃಶ್ಯವನ್ನು ನೋಡಿದ ಸ್ಥಳೀಯರು ಆತಂಕ್ಕೊಳಗಾಗಿದ್ದು, ಬಸ್​​ನ್ನು ಅಲ್ಲೇ ಬಿಟ್ಟು ಮೇಲೆ ಬರುವಂತೆ ಚಾಲಕನಿಗೆ ಹೇಳಿದ್ದಾರೆ.ಆದರೆ ಚಾಲಕ ಮಾತ್ರ ಬಸ್​​ ನಿಲ್ಲಿಸದೇ ಹರಸಾಹಸ ಪಟ್ಟು ದಡ ಮುಟ್ಟಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಹಾನಿ ಸಂಭವಿಸಿಲ್ಲ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರದಿಂದ ವಿಶೇಷ ಅಧಿವೇಶನ ಕರೆದು ಕೇಂದ್ರದ ಯೋಜನೆಗೆ ಅಡ್ಡಗಾಲು: ಆರ್.ಅಶೋಕ್‌

Spread the loveಬೆಂಗಳೂರು: ಕಾಂಗ್ರೆಸ್  ಸರ್ಕಾರ ವಿಶೇಷ ಅಧಿವೇಶನ  ಕರೆದು ಕೇಂದ್ರ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ