Breaking News

ಬೆಳಗಾವಿ, ಕಲಬುರಗಿ ಸೇರಿ ದೇಶದ 6 ಆಯ್ದ ವಿಮಾನ ನಿಲ್ದಾಣದಲ್ಲಿ ಪ್ಲೈಯಿಂಗ್ ಸ್ಕೂಲ್ ತೆರೆಯಲು ನಿರ್ಧರಿಸಿದೆ.

Spread the love

ಬೆಳಗಾವಿ : ಜಿಲ್ಲೆಗೆ ಕೇಂದ್ರ ಸರ್ಕಾರ ಕೊಡುಗೆಯನ್ನು ನೀಡಿದ್ದು,  ಬೆಳಗಾವಿ, ಕಲಬುರಗಿ ಸೇರಿ ದೇಶದ 6 ಆಯ್ದ ವಿಮಾನ ನಿಲ್ದಾಣದಲ್ಲಿ ಪ್ಲೈಯಿಂಗ್ ಸ್ಕೂಲ್ ತೆರೆಯಲು ನಿರ್ಧರಿಸಿದೆ.

ಬೆಳಗಾವಿ, ಕಲಬುರಗಿ, ಜಲಗಾಂವ್, ಖಜುರಾಹೊ, ಲೀಲಬಾರಿ ಮತ್ತು ಸೇಲಂ ವಿಮಾನ ನಿಲ್ದಾಣಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ  ಸರ್ಕಾರ ಪ್ರಸ್ತಾಪಿಸಿದೆ.  ಮುಂದಿನ 5 ವರ್ಷಗಳಲ್ಲಿ 9,488 ಪೈಲಟ್‌ಗಳ ಅಗತ್ಯವಿದೆ.  ಆದ್ದರಿಂದ ಆ ಮಟ್ಟಿಗೆ ಪೈಲಟ್ ನಿರ್ಮಿಸುವುದು ಅಗತ್ಯವಾಗಿರುತ್ತದೆ. 

ಈಗಾಗಲೇ ಭಾರತದಲ್ಲಿ 9 ಸಾವಿರ ಪೈಲಟ್ಸ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧ್ಯಕ್ಷ ಅರವಿಂದ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣದ ಅಧಿಕೃತ ಪೇಸ್ ಬುಕ್ ಪೇಜ್ ನಲ್ಲಿ  ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಪೈಲಟ್ ಶಾಲೆ ತೆರೆಯುತ್ತಿರುವುದು, ಮುಂದಿನ ದಿನಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣವನ್ನು ಹೆಚ್ಚು ಅಭಿವೃದ್ಧಿ  ಪಡಿಸಬಹುದು ಎಂಬ ನಿರೀಕ್ಷೆ ನಾಗರೀಕರಲ್ಲಿ ಮೂಡಿದೆ.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ