ಬೆಳಗಾವಿ: ದಿ.ಸುರೇಶ ಅಂಗಡಿ ನಿಧನ ಹಿನ್ನೆಲೆ ಖಾಲಿ ಇರುವ ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಗೆ ದಿನಾಂಕ ಘೋಷಣೆ ಯಾಗುವ ಮುನ್ನವೇ ಮಾಜಿ ಶಾಸಕ , ಬಿಜೆಪಿ ನಾಯಕರು ಟಿಕೆಟ್‍ಗಾಗಿ ಲಾಭಿ ನಡೆಸಿದ್ದಾರೆ.
ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಲು ಬೆಳಗಾವಿಗೆ ಆಗಮಿಸಿದ್ದಾರೆ. ಇದರ ಮಧ್ಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಬಿಜೆಪಿ ನಾಯಕರ ಟಿಕೆಟ್‍ಗಾಗಿ ಕಸರತ್ತು ಜೋರಾಗಿ ನಡೆಸಿದ್ದಾರೆ.
ಮಾಜಿ ಶಾಸಕ ಸಂಜಯ್ ಪಾಟೀಲ, ಯುವ ಮುಖಂಡರಾದ ರಾಜು ಚಿಕ್ಕನಗೌಡ್ರ, ಎಂ.ಬಿ.ಜಿರಲಿ ಸೇರಿದಂತೆ ಹಲವರು ಸಿಎಂ ಜತೆ ಚರ್ಚೆ ನಡೆಸಿ, ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡದಿದ್ದರೆ, ನಮ್ಮನ್ನು ಪರಿಗಣಿಸಿ ಎಂದು ಬಿಜೆಪಿ ಯುವ ನಾಯಕರು ಲಾಭಿ ನಡೆಸ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಬಿಜೆಪಿ ನಾಯಕರು ಬೆಳಗಾವಿ ಲೋಕಸಭಾ ಚುನಾವಣೆಗೆ ಸುರೇಶ ಅಂಗಡಿ ಅವರ ಕುಟುಂಬದವರಿಗೆ ನೀಡಿದರೆ, ಅನುಕಂಪದ ಆದಾರದ ಮೇಲೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇತ್ತ ಕೇಂದ್ರ ಯುವ ನಾಯಕರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಇದೆ.
ಬಿಜೆಪಿ ರಾಷ್ಟ್ರೀಯ ನಾಯಕರ ಚಿಂತನೆಯ ಬೇರೆಯಾಗಿದೆ. ಈ ಹಿಂದೆ ರಾಜ್ಯಸಭಾ, ಲೋಕಸಭಾ ಚುನಾವಣೆಯನ್ನು ಗಮನಿಸಿದರೆ, ಹೊಸ ಮುಖಗಳು ಆಯ್ಕೆ ಮಾಡಿದ್ದಾರೆ. ಈಗಲೂ ಹೊಸಬರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ.
ಒಟ್ಟಾರೆ ಚುನಾವಣೆ ದಿನಾಂಕಗೂ ಮೊದಲೇ ಟಿಕೆಟ್ ಗೆ ಕಸರತ್ತ ನಡೆದಿದ್ದು, ರಾಜ್ಯ, ರಾಷ್ಟ್ರೀಯ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ.