Breaking News

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಲ್ಲಿ ಪಾವರ್ ಫುಲ್ ಕ್ಯಾಂಡಿಡೇಟ್ ಯಾರಾಗಬಹುದು

Spread the love

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆ ಆಗಿಲ್ಲ ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಕಸರತ್ತು ಜೋರಾಗಿಯೇ ನಡೆದಿದೆ.

ಬಿಜೆಪಿ ಪಾಳೆಯದಲ್ಲಿ ಅಗಣಿತ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ,ಆದ್ರೆ ಕಾಂಗ್ರೆಸ್ ನಲ್ಲಿ ಅಬ್ಯರ್ಥಿಗಳ ಹುಡುಕಾಟ ಶುರುವಾಗಿದೆ.ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಲ್ಲಿ ಪಾವರ್ ಫುಲ್ ಕ್ಯಾಂಡಿಡೇಟ್ ಯಾರಾಗಬಹುದು ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ,ಮಾಜಿ ಮಂತ್ರಿ,ಮಾಜಿ ಸಂಸದ ,ವರ್ಕರ್ ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರೇ ಪಾವರ್ ಫುಲ್ ಎನ್ನುವದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಪ್ರಕಾಶ್ ಹುಕ್ಕೇರಿ ಜಿಲ್ಲಾ ಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದರು,ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು,ವರ್ಕರ್ ಆಗಿದ್ದಾರೆ,ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಬಿಜೆಪಿಗೆ ಪೈಪೋಟಿ ನೀಡಬಹುದು ಎನ್ನುವದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರ ಲೆಕ್ಕಾಚಾರವಾಗಿದೆ.

ಇನ್ನೂ ಕೆಲವರು ಅಶೋಕ ಪಟ್ಟಣ ಹೆಸರು ಹೇಳುತ್ತಿದ್ದಾರೆ ಇನ್ನು ಕೆಲವರು ಮಹಾಂತೇಶ ಕೌಜಲಗಿ ಬೆಸ್ಟ್ ಅನ್ನುತ್ತಿದ್ದಾರೆ,ಕಾಂಗ್ರೆಸ್ಸಿನ ಇನ್ನೊಂದು ಗುಂಪು ಲಕ್ಷ್ಮೀ ಹೆಬ್ಬಾಳಕರ,ಅಥವಾ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ,ಇಲ್ಲದಿದ್ದರೆ ಹೆಬ್ಬಾಳಕರ ಪುತ್ರ ಮೃನಾಲ ಹೆಬ್ಬಾಳಕರ ಮೂವರಲ್ಲಿ ಯಾರಾದ್ರೂ ಒಬ್ಬರಿಗೆ ಟಿಕೆಟ್ ಸಿಗೋದು ಗ್ಯಾರಂಟಿ ಅಂತೀದ್ದಾರೆ‌ .

ಕಾಂಗ್ರೆಸ್ ನಲ್ಲಿಯೂ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ,ಆದ್ರೆ ಕೆಪಿಸಿಸಿ ಅದ್ಯಕ್ಷ ಡಿ‌ಕೆ ಶಿವಕುಮಾರ್ ದೃಷ್ಠಿಯಲ್ಲಿ ಯಾರು ಪವರ್ ಫುಲ್ ಅಭ್ಯರ್ಥಿ ಅನ್ನೋದು,ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕವೇ ಗೊತ್ತಾಗಲಿದೆ.

ಜೆಡಿಎಸ್ ಕೂಡಾ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕುಳಿಸುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದ್ದು ,ಈ ಚುನಾವಣೆಯಲ್ಲಿ,ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾದ್ಯತೆಗಳೇ ಹೆಚ್ಚು


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ