Breaking News

ಲಿಬಿಯಾದಲ್ಲಿ 7 ಜನ ಭಾರತೀಯರ ಕಿಡ್ನ್ಯಾಪ್!

Spread the love

ಲಿಬಿಯಾದ ಸ್ಥಳೀಯ ಕ್ರಿಮಿನಲ್​ಗಳು 7 ಜನ ಭಾರತೀಯರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅವರನ್ನು ಬಿಡುಗಡೆ ಮಾಡಲು 20 ಸಾವಿರ ಡಾಲರ್‌ಗೆ ಡಿಮ್ಯಾಂಡ್ ಇಟ್ಟಿದ್ದಾರೆ.

ಬಿಹಾರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಮಹಾರಾಜ ಗಂಜ್, ಖುಷಿನಗರ , ದಿಯೋರಿಯಾ, ಗುಜರಾತಿನ ಅಮ್ರೇಲಿ, ಜಿಲ್ಲೆಯ 7 ಮಂದಿ ಭಾರತೀಯರು ಕಿಡ್ನ್ಯಾಪ್ ಆಗಿದ್ದಾರೆ. ಕಳೆದ ತಿಂಗಳು 7 ಭಾರತೀಯರ ವೀಸಾ ಅವಧಿ ಮುಗಿದಿತ್ತು. ಹೀಗಾಗಿ ಭಾರತಕ್ಕೆ ವಾಪಸಾಗುವುದಕ್ಕೂ ಮುನ್ನವೇ ಈ 7 ಜನರ ಕಿಡ್ನ್ಯಾಪ್ ಮಾಡಲಾಗಿದೆ. 7 ಜನ ಬಿಡುಗಡೆಗೆ 20 ಸಾವಿರ ಡಾಲರ್‌ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.

ನಮ್ಮವರನ್ನು ಬಿಡುಗಡೆಗೊಳಿಸಿ ಎಂದು ಭಾರತದ ವಿದೇಶಾಂಗ ಇಲಾಖೆಗೆ ಕಿಡ್ನ್ಯಾಪ್‌ಗೆ ಒಳಗಾಗಿರುವ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ವೀಸಾ ಅವಧಿ ಮುಗಿದಿತ್ತು:
ಸ್ಥಳೀಯ ಕ್ರಿಮಿನಲ್​ಗಳು 7 ಜನ ಭಾರತೀಯರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮತ್ತು ಅಪಹರಣಕಾರರು ಲಿಬಿಯಾದ ತಮ್ಮ ಕಂಪನಿಯಿಂದ 20 ಸಾವಿರ ಡಾಲರ್‌ಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯಾ ಬಸಂತ್ಪುರ ಗ್ರಾಮದ ನಿವಾಸಿ ಮುನ್ನಾ ಚೌಹಾಣ್ ಅವರು ದೆಹಲಿ ಮೂಲದ ಎನ್‌ಡಿ ಎಂಟರ್‌ಪ್ರೈಸಸ್ ಟ್ರಾವೆಲ್ ಏಜೆನ್ಸಿ ಮೂಲಕ 2019ರ ಸೆಪ್ಟೆಂಬರ್‌ನಲ್ಲಿ ಕಬ್ಬಿಣದ ವೆಲ್ಡರ್ ಆಗಿ ಲಿಬಿಯಾಕ್ಕೆ ತೆರಳಿದ್ದರು. ಅವರ ವೀಸಾ ಅವಧಿ 2020ರ ಸೆಪ್ಟೆಂಬರ್ 13ರಂದು ಮುಕ್ತಾಯಗೊಂಡಿತು, ಅವರು ಹಿಂದಿರುಗಬೇಕಿತ್ತು, ಆದರೆ ಅದಕ್ಕೂ ಮೊದಲೇ ಏಳು ಭಾರತೀಯರನ್ನು ಅಪಹರಿಸಲಾಗಿದೆ.


Spread the love

About Laxminews 24x7

Check Also

ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್​: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು

Spread the loveಚಿತ್ರದುರ್ಗ, ಆಗಸ್ಟ್​ 21: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್​​ನಿಂದಲೇ ವಿದ್ಯಾರ್ಥಿನಿ (student) ವರ್ಷಿತಾ(19) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್​ಪಿ ಪಿ.ದಿನಕರ್, ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ