Breaking News

ಜೂಜಾಟ: 22 ಮಂದಿ ಬಂಧನ.

Spread the love

ಬೆಳಗಾವಿ: ಇಲ್ಲಿನ ರಾಜಹಂಸ ಗಲ್ಲಿಯ ಸದಾನಂದ ಮಠದ ಪಕ್ಕದ ಗಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 22 ಮಂದಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜೂರ ಚೋಪಧಾರ, ಪ್ರದೀಪ ಲಾಟೂಕರ, ಮೋಯಿಜ ಗಚವಾಲೆ, ವಿಜಯ ಪಾಟೀಲ, ಪರಶುರಾಮ ಮೇತ್ರಿ, ಸುಶೀಲ ಮುದೋಳಕರ, ಬಾಬು ಯಾದವ, ಅನಿಲ ಯಳ್ಳೂರಕರ, ಕಿಸನ ಪಾಟೀಲ, ಜಹಾಂಗೀರಖಾನ ಪಠಾಣ, ವಿಜಯ ಶಿಂದೋಳಕರ, ದೀಪಕ ಹೊನ್ಯಾಳಕರ, ಆಕಾಶ ಜಕ್ಕಾನೆ, ವಿನಾಯಕ ಗಣಾಚಾರಿ, ಸಾಗರ ಮುತಗೇಕರ, ಸಮೀರ ತಹಶೀಲ್ದಾರ, ಸದಾನಂದ ಅಸಲ್ಕರ, ಹಿದಾಯಶೇಕ ಶೇಖ್, ಪರಶುರಾಮ ಲೋಹಾರ, ಅಭಿ ಭೋಗಾರ, ವಾಸಿಂ ಪತ್ತೆ, ಸಂದೀಪ ಮುದೋಳಕರ ಬಂಧಿತರು. ಅವರಿಂದ ₹ 1.85 ಲಕ್ಷ, 14 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

‘ನಗರದಲ್ಲಿ ಜೂಜಾಟ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯವ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ.


Spread the love

About Laxminews 24x7

Check Also

ರಬಕವಿಯಲ್ಲಿ ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು ಹಿಡಿದು ಸಂಚರಿಸಿದ ಕಳ್ಳರು

Spread the love ಬಾಗಲಕೋಟೆ: ರಬಕವಿಯಲ್ಲಿ  ಮುಖಕ್ಕೆ ಮಾಸ್ಕ್ ಕೈಯಲ್ಲಿ ಕೋಲು ಹಿಡಿದು 6 ಜನ ಕಳ್ಳರು ಸಂಚರಿಸಿದ್ದಾರೆ. ಜ.19ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ