ಬೆಂಗಳೂರು: ಕನ್ನಡ ಚಿತ್ರರಂಗ ದಿನ ದಿನಕ್ಕೆ ಒಂದೊಂದೇ ಹೆಸರುಗಳನ್ನು ಕೇಳಿ ಬೆಚ್ಚುತ್ತಿದೆ. ಈಗಾಗಲೇ ಖಾಕಿ ಪಡೆ ಸ್ಯಾಂಡಲ್‍ವುಡ್ ಕೆಲವು ನಟ-ನಟಿಯರನ್ನು ಡ್ರಗ್ಸ್ ಜಾಲದ ವಿಷಯದಲ್ಲಿ ಕರೆದು ವಿಚಾರಣೆ ನಡೆಸಿದ್ದು, ಈಗಲೂ ನಡೆಸುತ್ತಿದೆ. ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ. ಇದರ ಬೆನ್ನಿಗೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಕನ್ನಡದ ಎ ವನ್ ಸ್ಟಾರ್‌ಗಳೂ ಇದರಲ್ಲಿದ್ದಾರೆ ಎಂದು ಗುಡುಗಿದ್ದಾರೆ.
ಹೌದು. ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಡ್ರಗ್ಸ್ ಸುಂಟರಗಾಳಿ ಇನ್ನೂ ನಿಂತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ ತನಿಖೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿರುವ ಸಿಸಿಬಿ ಇನ್ನೂ ಒಂದೆರಡು ದಿನಗಳಲ್ಲೇ ಆಪರೇಷನ್ ಪಾರ್ಟ್-2 ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಸಿಸಿಬಿ ಮೂಲಗಳ ಪ್ರಕಾರ, ಕೇವಲ ನಟಿ ಸಂಜನಾ, ರಾಗಿಣಿ, ದಿಗಂತ್, ಐಂದ್ರಿತಾ, ಅಕುಲ್ ಬಾಲಾಜಿ, ಸಂತೋಷ್ ಆರ್ಯನ್ ಮಾತ್ರವಲ್ಲ, ಬಣ್ಣದ ಲೋಕದ ಇನ್ನಷ್ಟು ದೊಡ್ಡ ಮಂದಿ ಈ ವಿಷಜಾಲದಲ್ಲಿ ಸಿಲುಕಿರುವ ಶಂಕೆಯಿದೆ.
Laxmi News 24×7