Breaking News

ಟ್ರ್ಯಾಕ್ಟರ್‌ಗಳ ಚಕ್ರಗಳ ಕಳವು: 7 ಆರೋಪಿಗಳ ಬಂಧನ

Spread the love

ಬೆಳಗಾವಿ: ರಸ್ತೆ ಬದಿ ಹಾಗೂ ತೋಟದ ಮನೆಗಳ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಟ್ರೇಲರ್‌ಗಳ ಡಿಸ್ಕ್‌ ಸಮೇತ ಚಕ್ರಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಶುಕ್ರವಾರ ಬಂಧಿಸಿರುವ ಖಡಕಲಾಟ ಠಾಣೆ ಪೊಲೀಸರು, ಅವರಿಂದ ₹ 8.61 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಪ್ಪಾಣಿ ತಾಲ್ಲೂಕು ಗಳತಗಾದ ಮಾರುತಿ ಠೊಣ್ಣೆ, ಮಹಾದೇವ ಮಾಕಾಳೆ, ಬಾಬು ಡಾಲೆ, ಶಿವಾನಂದ ಗಜಬರ, ಖಾನಾಪುರ ತಾಲ್ಲೂಕು ಕಕ್ಕೇರಿಯ ಸಂಜು ಅಂಬಡಗಟ್ಟಿ ಶ್ರಾವಣ ಹುಲಮನಿ ಹಾಗೂ ಘಷ್ಟೊಳಿ ದಡ್ಡಿಯ ಸಂತೋಷ ನಾಗಣ್ಣವರ ಬಂಧಿತರು.

‘ಅವರು ಖಡಕಲಾಟ, ನಿಪ್ಪಾಣಿ, ಸದಲಗಾ, ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ಚಿಕ್ಕೋಡಿ, ಅಂಕಲಿ, ಕಿತ್ತೂರ, ಹಾರೂಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಅವರಿಂದ ₹ 4.60 ಲಕ್ಷ ಮೌಲ್ಯದ ಡಿಸ್ಕ್‌ ಸಮೇತ 46 ಚಕ್ರಗಳು, 2 ಟಾಟಾ ಸುಮೊ ವಾಹನ ಹಾಗೂ ಕಳವು ಮಾಡಲು ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಡಕಲಾಟ ಪಿಎಸ್‌ಐ ಎಸ್.ಎಸ್. ಮಂಟೂರ ಹಾಗೂ ನಿಪ್ಪಾಣಿ ಪಿಎಸ್‌ಐ ಬಿ.ಎಸ್. ತಳವಾರ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ದುಷ್ಕರ್ಮಿಗಳು ಪರಾರಿ…

Spread the love ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ದುಷ್ಕರ್ಮಿಗಳು ಪರಾರಿ… ವಿಜಯಪುರ: ಯುವಕನ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ