Breaking News

ನಾವು ಏನೂ ಮಾತನಾಡೋ ಹಾಗಿಲ್ಲ -ಐಂದ್ರಿತಾ ರೈ

Spread the love

ನಿನ್ನೆಯಷ್ಟೆ ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ಕುರಿತಾಗಿ ದಿಗಂತ್​-ಐಂದ್ರಿತಾ ದಂಪತಿಗೆ ಸಿಸಿಬಿ ವಿಚಾರಣೆ ನಡೆಸಿತ್ತು. ಮತ್ತೆ ಕರೆದರೆ ಹೋಗೋದಾಗಿ ಕೂಡ ತಿಳಿಸಿದ್ದರು. ಇನ್ನು, ಇಂದು ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಕಂಡು ಬಂದ ದಿಗಂತ್​ ತಾಯಿ ಹಾಗೂ ಐಂದ್ರಿತಾ ರೇ, ಮಾಧ್ಯಮದವರ ಜೊತೆ ಮಾತನಾಡಿದ್ರು.

ದಂಪತಿಗೆ ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ, ‘ನಾವು ಏನೂ ಮಾತನಾಡೋ ಹಾಗಿಲ್ಲ.

ಇನ್ನೂ ವಿಚಾರಣೆ ಕಂಪ್ಲೀಟ್​ ಆಗಿಲ್ಲ. ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತಿಲ್ಲ ಅಂತ ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ’ ಅಂತ ಐಂದ್ರಿತಾ ಮಾಧ್ಯಮಗಳಿಗೆ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ ನಾಳೆ ದಿಗಂತ್​ ‘ಮಾರಿಗೋಲ್ಡ್’​ ಚಿತ್ರದ ಶೂಟಿಂಗ್​ಗೆ ಹೋಗ್ತಿದ್ದಾರೆ ಅಂತ ದಿಗಂತ್​ ತಾಯಿ ಹಾಗೂ ಐಂದ್ರಿತಾ ರೇ ತಿಳಿಸಿದ್ದಾರೆ. ಜೊತೆಗೆ ಸಿಸಿಬಿ ಮತ್ತೆ ನೋಟಿಸ್​ ಕೊಡುವ ಬಗ್ಗೆ ನನಗೆ ಏನೂ ಗೊತ್ತಿಲ್ಲ ಅಂತಿದ್ದಾರೆ ಐಂದ್ರಿತಾ ರೇ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ