Breaking News

ಕಂಗನಾ ವಿರುದ್ಧ ಗುಡುಗಿರುವ ರಾಖಿ ಸಾವಂತ್ ಭಿಕ್ಷೆ ಬೇಡಲು ಮುಂಬೈಗೆ ಏಕೆ ಬಂದೆ?.

Spread the love

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ರಾಖಿ ಸಾವಂತ್ ನಡುವಿನ ಜಟಾಪಟಿ ಮುಂದುವರಿದಿದೆ. ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಬಾಲಿವುಡ್ ಬಹುತೇಕ ತಾರೆಯರು ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಕಂಗನಾ ವಿರುದ್ಧ ಗುಡುಗಿರುವ ರಾಖಿ ಸಾವಂತ್ ಭಿಕ್ಷೆ ಬೇಡಲು ಮುಂಬೈಗೆ ಏಕೆ ಬಂದೆ?. ನೀವು ಇದಲ್ಲಿಯೇ ಇರಬೇಕಿತ್ತ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿರೋ ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ನಲ್ಲಿರುವವರು ಕೆಟ್ಟವರಾ? ಬಾಲಿವುಡ್ ಕಂಗನಾಳನ್ನ ಬಾಯ್‍ಕಾಟ್ ಮಾಡಿ. ಅಲ್ಲೇ ಹಿಮಾಲಯದ ಮನೆಯಲ್ಲಿ ಕುಳಿತುಕೊಳ್ಳಿ. ಬಾಲಿವುಡ್ ಸಿನಿಮಾದ ಹಣದಿಂದ ಊರಲ್ಲಿ ಮನೆ ಇದೆ. ಮೊದಲಿಗೆ ಅದು ಸಹ ಇರಲಿಲ್ಲ. ಈಗ ಬಾಲಿವುಡ್ ಕಂಗನಾಗೆ ಕೆಟ್ಟದಾಗಿ ಕಾಣುತ್ತಿದೆಯಾ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ.

ಕಂಗನಾ ಹೇಳಿಕೆ ಪ್ರಕಾರ ಮುಂಬೈನಲ್ಲಿ ಭಯೋತ್ಪಾದಕರಿದ್ದಾರೆ ಅಂತೆ. ಮುಂಬೈ ನಗರವನ್ನ ಪಿಓಕೆ ಹೋಲಿಕೆ ಮಾಡೋದು ಎಷ್ಟು ಸರಿ. ಮುಂಬೈ ಬಗ್ಗೆ ಮಾತನಾಡುವ ನೀನು ಇಲ್ಲಿಗ್ಯಾಕೆ ಬಂದಿರುವೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಇದೆನಾ? ನೋಡೋಣ ನೀನು ಎಷ್ಟು ಜನರಿಗೆ ಉದ್ಯೋಗ ಕೊಡ್ತೀಯಾ ತಿಳಿಸು. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ನೀಡಿರುವ ಕರಣ್ ಜೋಹರ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಿನ್ನ ವರ್ತನೆಗೆ ಸಿನಿಮಾಗಳು ಸಿಕ್ಕಿಲ್ಲ. ಹಾಗಾಗಿ ನಿನ್ನದೇ ಪ್ರೊಡೆಕ್ಷನ್ ಹೌಸ್ ಮಾಡಿಕೊಡು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.


Spread the love

About Laxminews 24x7

Check Also

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ

Spread the loveಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ