Breaking News

ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್:ನಟಿ ಕಾವ್ಯ ಗೌಡಲ

Spread the love

ಬೆಂಗಳೂರು: ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಆದರೆ ಕಾಂಡೋಮ್ ಕೊಳ್ಳುವವನಲ್ಲ ಎಂದು ‘ರಾಧಾರಮಣ’ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಹೇಳಿದ್ದಾರೆ.

ನಟಿ ಕಾವ್ಯ ಗೌಡ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. “ಆತ್ಮೀಯ ಹುಡುಗಿಯರೇ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಎಂದಿಗೂ ಬಿಚ್ಚಬೇಕಾಗಿಲ್ಲ. ಅದೇ ರೀತಿ ಮದುವೆಗೂ ಮುನ್ನ ಡೇಟಿಂಗ್ ಹೋಗುವುದು ಸರಿ. ಆದರೆ ಮಂಚಕ್ಕೆ ಹೋಗುವುದು ಸರಿಯಿಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್‍ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ” ಎಂದು ಕಾವ್ಯಗೌಡ ಹೇಳಿದ್ದಾರೆ.

ಅಷ್ಟೇ ಅಲ್ಲದೇ “ನಿಮ್ಮನ್ನು ಹೋಟೆಲ್‍ಗಳಿಗೆ ಕರೆದುಕೊಂಡು ಹೋಗದೆ ತನ್ನ ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಬೆತ್ತಲೆಯನ್ನು ಕೇಳುವವನಲ್ಲ. ನಿಮ್ಮ ಮನಸ್ಸು ಮತ್ತು ಹೃದಯವನ್ನು ಅರ್ಥ ಮಾಡಿಕೊಳ್ಳುವ ಹುಡುಗನನ್ನು ಪಡೆಯಿರಿ. ನಿಮ್ಮ ದೇಹವನ್ನು ಬಯಸುವವನಲ್ಲ” ಎಂದು ಕಾವ್ಯ ಬರೆದುಕೊಂಡಿದ್ದಾರೆ.

“ಗೌರವವು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಒಬ್ಬ ನಿಜವಾದ ವ್ಯಕ್ತಿ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಮಹಿಳೆ ಎಂದರೆ ಕೇವಲ ನಿಮಗೆ ಅಡುಗೆ ಮಾಡುವ, ನಿಮ್ಮ ಬಟ್ಟೆ ತೊಳೆಯುವ ಗೃಹಿಣಿ ಮಾತ್ರವಲ್ಲ. ಅವಳು ಗೃಹಿಣಿಯಾಗಿದ್ದು, ನಿಮ್ಮ ಮನೆಗೆ ಬಂದಮೇಲೆ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾ, ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಅಂತಹ ಮಹಿಳೆಯರಿಗೆ ಗೌರವ ತೋರಿಸುವುದು ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ” ಎಂದು ನಟಿ ಕಾವ್ಯ ಗೌಡ ಮಹಿಳೆಯರ ಬಗ್ಗೆ ಹೇಳಿದ್ದಾ


Spread the love

About Laxminews 24x7

Check Also

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

Spread the love ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ