ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿಗೆ ಅಲರ್ಜಿ ಸಮಸ್ಯೆ ಕಾಣಿಸಿದೆ.
ನನಗೆ ಅಲರ್ಜಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಡಾಕ್ಟರ್ ಸೇವೆ ಅಗತ್ಯವಿದೆ ಎಂದು ರಾಗಿಣಿ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಈ ಹಿಂದೆ ರಾಗಿಣಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು.
ರಾಗಿಣಿಯ ಮನವಿಯಂತೆ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದ ರಾಗಿಣಿ ಸದ್ಯ ಸಾಮಾನ್ಯ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಊಟ ಮತ್ತು ಎಣ್ಣೆಯಿಂದ ಅಲರ್ಜಿ ಸಮಸ್ಯೆ ಆಗಿರುವ ಸಾಧ್ಯತೆಯಿದೆನಟಿ ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಕೋರ್ಟ್ ಮುಂದೆ ಬರಲಿದೆ. ಅನಾರೋಗ್ಯದ ನೆಪ ಹೇಳಿ 2 ದಿನ ರಾಗಿಣಿಯನ್ನು ವಿಚಾರಣೆ ನಡೆಸಲಾಗಿಲ್ಲ. ಹೀಗಾಗಿ ಸಿಸಿಬಿ ಮತ್ತೆ 5 ದಿನ ಕಸ್ಟಡಿ ಕೇಳುವ ಸಾಧ್ಯತೆಯಿದೆ.
Laxmi News 24×7