ಬೆಳಗಾವಿ: ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಟಿವಿಲಿ ಬರುತ್ತಾರೆ ಎಂದ್ರೆ ದೇಶಕ್ಕೆ ಏನೇ ಕಾದಿದೆ ಎಂದೇ ಅರ್ಥ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕುಟುಕಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ 1 ವಾರ ಸಮಯ ಕೊಡಬೇಕಿತ್ತು. ಜನರು ತಮ್ಮ ಊರುಗಳಿಗೆ ಸೇರುತ್ತಿದ್ದರು. ಆ ಬಳಿಕ ಲಾಕ್ ಡೌನ್ ಮಾಡಬೇಕಿತ್ತು. ಆದರೆ ಒಮ್ಮೆಲೆ ಲಾಕ್ ಡೌನ್ ಮಾಡಿದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿಯಿತು ಎಂದರು.
ಕೋವಿಡ್ ನಿಯಂತ್ರಣ ಗೊಳಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಯಿತು. ಜನರೇ ಸರ್ಕಾರಕ್ಕೆ ಆಕ್ಸಿಜನ್ ಕೊಡುವ ಕೆಲಸವಾಗಬೇಕಿದೆ.
ಪ್ರತಿಯೊಂದು ಕೇಸ್ ಗಳನ್ನು ಪ್ರತಿ ಜಿಲ್ಲೆಯ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸುತ್ತಿದ್ದರು. ಇದರಿಂದ ಅಲ್ಲಿ ಬೇಡ್ ಗಳ ಕೊರತೆ ಹೆಚ್ಚಾಗಿ ಸಮಸ್ಯೆ ಅನುಭವಿಸುವಂತಾಯಿತು.
ಪ್ರತಿ ಕೇಸ್ ಗಳಿಗೆ ಕೊರೊನಾ ಪರೀಕ್ಷೆ ವರದಿ ಬೇಕು ಎಂದು ಕೇಳುತ್ತಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಿ, ನಿಯಂತ್ರಣ ವಿಫಲವಾಗಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದಾವೆ ಎಂದು ಹೇಳಿದರು.
Laxmi News 24×7