Breaking News

ಐವರು ಐಪಿಎಸ್ ಅಧಿಕಾರಿಗಳ ವರ್ಗಮಾಡಿ ರಾಜ್ಯ ಸರ್ಕಾರ ಆದೇಶ

Spread the love

ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಐವರು ಐಪಿಎಸ್ ಹಾಗೂ ಒಬ್ಬರು ಕರ್ನಾಟಕ ಸೇವೆಯ ಡಿಸಿಪಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಮೂಲಗಳ ಪ್ರಕಾರ ಈ ಹಿಂದೆ CCB ವಿಭಾಗದಲ್ಲಿ DCP ಆಗಿದ್ದ ಕುಲ್​ದೀಪ್​ ಕುಮಾರ್ ಜೈನ್​ರನ್ನು ACB ಎಸ್​ಪಿಯಾಗಿ ನೇಮಿಸಲಾಗಿದ್ದು, ರವಿಕುಮಾರ್​ವರನ್ನು CCBಯ ಡಿಸಿಪಿ ಗ್ರೇಡ್​ 2 ರಿಂದ CCB ಡಿಸಿಪಿ ಗ್ರೇಡ್ 1 ಆಗಿ ವರ್ಗಾಯಿಸಲಾಗಿದೆ. ಅಂತೆಯೇ ಬೆಳಗಾವಿಯ ಡಿಸಿಪಿ ಆಗಿದ್ದ ಸೀಮಾ ಅನಿಲ್ ಲಟ್ಕರ್​ರನ್ನು CCB ಎಐಜಿ ಆಗಿ ನೇಮಿಸಲಾಗಿದ್ದು, ಬಳ್ಳಾರಿ ಎಸ್ಪಿ ಆಗಿದ್ದ ಸಿ.ಕೆ.ಬಾಬಾ ಬೆಂಗಳೂರಿನ ಸಿಐಡಿ, ಎಸ್​ಪಿ ಆಗಿ ನೇಮಿಸಲಾಗಿದೆ. ಇನ್ನು ಲೋಕಾಯುಕ್ತ ಎಸ್​ಪಿ ಆಗಿದ್ದ ಸೈದುಲು ಅದಾವತ್​ರನ್ನು ಬಳ್ಳಾರಿ ಜಿಲ್ಲಾ ಎಸ್​ಪಿಯಾಗಿ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಮಾರ್ಚ್ 3 ಚಂದ್ರ ಗ್ರಹಣದ ಹಿನ್ನೆಲೆ ಈ ಎಲ್ಲಾ ದೇವಾಲಯಗಳು ಬಂದ್!

Spread the loveಬೆಂಗಳೂರು: ಮಾರ್ಚ್ 3ರಂದು ಸಂಭವಿಸಲಿರುವ ವರ್ಷದ ಮೊದಲ ಹಾಗೂ ಹಿಂದು ಪಂಚಾಂಗದ ಪ್ರಕಾರ ವರ್ಷದ ಕೊನೆಯ ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ