Breaking News

ಬಡ ರೋಗಿಗಳಿಗಾಗಿ ನೂತನ ಕೋವಿಡ್ ಆಸ್ಪತ್ರೆ ನಿರ್ಮಿಸಿದ ಸಚಿವೆ ಶಶಿಕಲಾ ಜೊಲ್ಲೆ

Spread the love

ಚಿಕ್ಕೋಡಿ: ಗಡಿ ಜಿಲ್ಲೆಯ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಅವರ ಪರಿಶ್ರಮ ನೂತನ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ, ಜೊಲ್ಲೆ ಉದ್ಯೋಹ ಸಮೂಹ ಸಹಯೋಗದಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

ಸಚಿವೆ ಶಶಿಕಲಾ ಜೊಲ್ಲೆ ಅವರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರರಕಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರೋಗಿಗಳಿಗೆ ಬೆಡ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 40 ಬೆಡ್‍ಗಳ ಸುಸಜ್ಜಿತ ಸೆಂಟರ್ ಆರಂಭ ಮಾಡಲಾಗಿದೆ

ಕೋವಿಡ್ ಕೇಂದ್ರದಲ್ಲಿರುವ 16 ಆಕ್ಸಿಜನ್ ಬೆಡ್ ಸೇರಿ 40 ಬೆಡ್ ವ್ಯವಸ್ಥೆ ಮಾಡಲಾಗಿದೆ. ನಿಪ್ಪಾಣಿಯ ಎಲ್ಲಾ ವೈದ್ಯರ ಸಹಯೋಗದಲ್ಲಿ ಪ್ರಾರಂಭವಾದ ಸೆಂಟರ್ ಇದಾಗಿದ್ದು, ಕೊವಿಡ್ ರೋಗಿಗಳಿಗಾಗಿ ಒಂದು ಪ್ರತ್ಯೇಕ ಅಂಬುಲೆನ್ಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಇದರೊಂದಿಗೆ ಪೌಷ್ಠಿಕ ಆಹಾರದ ವ್ಯವಸ್ಥೆ ಕೂಡ ಸೆಂಟರ್ ನಲ್ಲಿ ಮಾಡಲಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಜೊಲ್ಲೆ ಉದ್ಯೋಗ ಸಮೂಹ ಮುಂದಾಗಿದ್ದು, ಬಡ ಜನರಿಗೆ ಆಸ್ಪತ್ರೆ ಸಾಕಷ್ಟು ಅನುಕೂಲವಾಗಲಿದೆ.


Spread the love

About Laxminews 24x7

Check Also

ಹೆಗಲ ಮೇಲೆ ತಾಯಿ ಹೊತ್ತುಕೊಂಡು 220 ಕಿಮೀ ಪಾದಯಾತ್ರೆ ಮೂಲಕ ವಿಠ್ಠಲನ ದರ್ಶನ ಮಾಡಿಸಿದ ಮಗ

Spread the love ಹೆಗಲ ಮೇಲೆ ತಾಯಿ ಹೊತ್ತುಕೊಂಡು 220 ಕಿಮೀ ಪಾದಯಾತ್ರೆ ಮೂಲಕ ವಿಠ್ಠಲನ ದರ್ಶನ ಮಾಡಿಸಿದ ಮಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ