ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಐರಾ ಮತ್ತು ಜೂ.ಯಶ್ ಫೋಟೋಗಳನ್ನ ಶೇರ್ ಮಾಡಿದ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಇದೀಗ ನಟ ಯಶ್ ಪುತ್ರ ಗಣಪನ ಅವತಾರದಲ್ಲಿ ಮಿಂಚಿದ್ದಾನೆ.
ಇತ್ತೀಚಿಗೆ ಕೃಷ್ಣ ಜನ್ಮಾಷ್ಟಮಿ ದಿನ ಐರಾ ಮತ್ತು ಜೂನಿಯರ್ ಯಶ್‍ಗೆ ರಾಧೆ ಹಾಗೂ ಕೃಷ್ಣನ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜೂನಿಯರ್ ಯಶ್ ಗಣೇಶನ ಅವತಾರದಲ್ಲಿ ಮಿಂಚಿದ್ದಾನೆ.
ಕೃಷ್ಣನ ಅವತಾರದಲ್ಲಿ ಕ್ಲಿಕ್ಕಿಸಿದ್ದ ಯಶ್ ಮಗನ ಫೋಟೋವನ್ನು ಗಣೇಶನ ರೀತಿ ಎಡಿಟ್ ಮಾಡಲಾಗಿದೆ. ಪಕ್ಕದಲ್ಲಿ ಮೂಷಿಕನನ್ನು ಕೂರಿಸಿಕೊಂಡು, ಕೈಯಲ್ಲಿ ಮೋದಕ ಹಿಡಿದು ಕುಳಿತಿರುವ ರೀತಿ ಫೋಟೋವನ್ನು ಎಡಿಲ್ ಮಾಡಲಾಗಿದೆ. ಪುಟ್ಟ ಗಣೇಶನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋವನ್ನು ಸ್ವತಃ ಯಶ್ ಕೂಡ ತನ್ನ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಶೇರ್ ಮಾಡಿದ್ದು, ‘ಸೂಪರ್ ನನ್ನ ಪುಟ್ಟ ಗಣೇಶ’ ಎಂದು ಕ್ಯಾಪ್ಷನ್ ನೀಡಿದ್ದಾರೆ.