Breaking News
Home / new delhi / ಲವರ್​ ಅನ್ನು ಮದುವೆ ಆಗೋಕೆ ಅದೇನೆಲ್ಲಾ ಡ್ರಾಮಾ ಮಾಡಿದ್ಳು ಕಿರಾತಕಿ!

ಲವರ್​ ಅನ್ನು ಮದುವೆ ಆಗೋಕೆ ಅದೇನೆಲ್ಲಾ ಡ್ರಾಮಾ ಮಾಡಿದ್ಳು ಕಿರಾತಕಿ!

Spread the love

ನವದೆಹಲಿ: ಆಕೆಗೆ ಮೂವತ್ತು ವರ್ಷ ವಯಸ್ಸು. ಆಕೆಯ ಗಂಡನ ವಯಸ್ಸು 50. ಅಬೋಧಾವಸ್ಥೆಯಲ್ಲಿದ್ದ ಪತಿಯನ್ನು ಮನೆಗೆಲಸದವನ ನೆರವಿನೊಂದಿಗೆ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಳು. ಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ ಡಾಕ್ಟರ್ ಎಂದು ಹೇಳಿದ್ದಳು.

ತುರ್ತು ಚಿಕಿತ್ಸೆಗಾಗಿ ಆತನನ್ನು ಪರಿಶೀಲಿಸಿದಾಗ ಪ್ರಾಣ ಹೋಗಿವುದು ಖಚಿತವಾಗಿದೆ. ಅದನ್ನು ಡಾಕ್ಟರ್ ಆ ಮಹಿಳೆಗೆ ತಿಳಿಸಿದ್ರು. ಇದೇ ವೇಳೆ, ಮಹಿಳೆಯ ನಡವಳಿಕೆಯಿಂದ ಸಂದೇಹಗೊಂಡ ಡಾಕ್ಟರ್ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಪೊಲೀಸರು ಕೂಡಲೇ ಆಸ್ಪತ್ರೆಗೆ ಆಗಮಿಸಿದ್ರು.

ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ರು. ಆಕೆ ಡಾಕ್ಟರ್ ಎದುರು ಏನು ಹೇಳಿದಳೋ ಅದನ್ನೆ ಪೊಲೀಸರಿಗೂ ವರದಿ ಒಪ್ಪಿಸಿದಳು. ಮನೆಗೆಲಸದ ಕರಣ್​​ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು. ಇಬ್ಬರ ಹೇಳಿಕೆ ಪಡೆದ ನಂತರ ಆತ್ಮಹತ್ಯೆಗೆ ಯತ್ನಿಸಿದ ಜಾಗ ತೋರಿಸಲು ಹೇಳಿದ್ರು.

ಮಹಿಳೆ ಮತ್ತು ಆ ಮನೆಗೆಲಸದವ ಪೊಲೀಸರ ಜತೆಗೆ ಮನೆಗೆ ಹೋದರು. ಅಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಕುರುಹು ಕಾಣಲಿಲ್ಲ.

ಇಬ್ಬರ ಹೇಳಿಕೆಯೂ ಬೇರೆ ಬೇರೆಯಾಗಿದ್ದ ಕಾರಣ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ರು. ಆಗ ಬಹಿರಂಗವಾಯಿತು ದಾಂಪತ್ಯದ ದುರಂತ ಕಥೆ. ಪೊಲೀಸರಿಗೆ ಅವರು ನೀಡಿದ ಹೇಳಿಕೆ ಪ್ರಕಾರ, ಆ ಮಹಿಳೆ ಲವರ್ ಜತೆ ಮದುವೆ ಆಗಬೇಕು ಅಂತ ಅದೇನೆಲ್ಲಾ ಡ್ರಾಮಾ ಮಾಡಿದ್ಳು ! ಇದು ನವದೆಹಲಿಯ ಬುಧವಿಹಾರ್ ಪ್ರದೇಶದಲ್ಲಿ ನಡೆದ ದುರಂತ ಕಥೆ.

ಅವರಿಗೆ ಮಕ್ಕಳಾಗೋದಿಲ್ಲ ಅನ್ನೋದು ಖಾತ್ರಿ ಇತ್ತು. ಹಸಿ ಯೌವನದ ಈಕೆಗೊಬ್ಬ ಲವರ್ ಜತೆಯಾದ. ಆತನ ಹೆಸರು ವೀರು ಬರ್ಮಾ. ದಾಂಪತ್ಯ ಸುಖವಿಲ್ಲದ ಮೇಲೆ ಗಂಡನ ಜತೆಗೆ ಯಾಕಿರಬೇಕು ಅನ್ನೋ ಆಲೋಚನೆ ಹುಟ್ಟಿದ್ದೇ ತಡ, ವೀರು ಬರ್ಮಾ ಮತ್ತು ಮನೆಗೆಲಸದ ಕರಣ್​ ಜತೆಗೂಡಿ ಪತಿಯ ಹತ್ಯೆ ಮಾಡೋದಕ್ಕೆ ಸ್ಕೆಚ್ ರೂಪಿಸಿದ್ಳು. ಕರಣ್ ಸಹಾಯದೊಂದಿಗೆ ನಿದ್ದೆ ಗುಳಿಗೆ ನುಂಗಿಸಿ ಹತ್ಯೆ ಮಾಡಿ ನಂತರ ಆತ್ಮಹತ್ಯೆಯ ಕಥೆ ಕಟ್ಟೋದಕ್ಕೆ ಪ್ರಯತ್ನಿಸಿದ್ದರು. ಪತಿಯನ್ನು ಹತ್ಯೆ ಮಾಡಿದ ನಂತರ ಬರ್ಮಾ ಜತೆಗೆ ಮದುವೆ ಮಾಡಿಕೊಂಡರೆ ಆತನ ಆಸ್ತಿಯೂ ತನ್ನದಾಗುವುದೆಂಬ ಆಲೋಚನೆಯಲ್ಲಿದ್ದಳು ಆ ಮಹಿಳೆ. ಆದರೆ, ಅದು ಈಡೇರಲಿಲ್ಲ. ಈಗ ಮೂವರನ್ನೂ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)


Spread the love

About Laxminews 24x7

Check Also

ಬಕ್ರಿದ್ ಹಬ್ಬ ಹಿನ್ನಲೆ ಇಂದು ಮಧ್ಯರಾತ್ರಿಯಿಂದ ಜೂ. 18 ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ನಿಷೇಧ

Spread the love ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬವನ್ನು ಶಾಂತಿ, ಸಹೋದರತ್ವದಿಂದ ಆಚರಿಸುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ