Breaking News

ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ

Spread the love

ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದ್ದು, ಈ ಬಾರಿ ಕೊರೊನಾ ವೈರಸ್ ಕಾಟದಿಂದ ಜನ ಹಬ್ಬಗಳನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಅಂತೆಯೇ ಈ ಬಾರಿ ಮೂರ್ತಿ ತಯಾರಕರು ಕೂಡ ಗಣೇಶನನ್ನು ಸ್ವಲ್ಪ ವಿಭಿನ್ನವಾಗಿ ರೂಪಿಸುತ್ತಿದ್ದಾರೆ.

ಹೌದು. ಕೊಯಂಬತ್ತೂರು ಮೂಲದ ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ. ಗಣೇಶ ಬಂದು ಕೊರೊನಾವನ್ನು ಹೊಡೆದು ಸಾಯಿಸುವಂತೆ ಮೂರ್ತಿಯನ್ನು ತಯಾರಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ರಾಜಾ, ಮಹಾಮಾರಿ ಕೋವಿಡ್ 19 ಎಂಬ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನು ಈ ಗಣೇಶನ ವಿಗ್ರಹವನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ಕಲಾವಿದರೊಬ್ಬರು ಕೂಡ ಗಣೇಶನನ್ನು ಆರೋಗ್ಯ ರಕ್ಷಕನನ್ನಾಗಿ ಮಾಡಿದ್ದರು. ಗಣೇಶನನ್ನು ವೈದ್ಯ ಹಾಗೂ ಆತನ ವಾಹನ ಇಲಿಯನ್ನು ದಾದಿಯಂತೆ ಮೂರ್ತಿ ತಯಾರಿಸಿದ್ದರು


Spread the love

About Laxminews 24x7

Check Also

ಮೂಡಲಗಿಯಲ್ಲಿ ಸಾಯಿ ಮಂದಿರ ಉದ್ಘಾಟನೆ*

Spread the love *ಒಂದೇ ಮಂದಿರದಲ್ಲಿ ಭಕ್ತರಿಗೆ ಶಿರಡಿ ಸಾಯಿಬಾಬಾ ಮತ್ತು ಪುಟ್ಟಪರ್ತಿ ಸಾಯಿಬಾಬಾರ ದರ್ಶನ ಭಾಗ್ಯ- ಶಾಸಕ ಬಾಲಚಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ