ಬೆಂಗಳೂರು,ಆ.7-ಕೊರೋನಾ ಬಾಧೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸುವವರು ಯಾರು ಎಂಬ ಈಗ ಪ್ರಶ್ನೆ ಎದುರಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೂ ಕ್ವಾರಂಟೈನ್ ಕಟ್ಟುಪಾಡಿನ ಪ್ರಕಾರ ಯಡಿಯೂರಪ್ಪನವರು 14 ದಿನಗಳ ಕಾಲ ಅಂದರೆ 16ನೇ ತಾರೀಖಿನವರೆಗೆ ಮನೆಯಲ್ಲಿಯೇ ಇರಬೇಕಾಗುತ್ತದೆ.
ಈ ಕಾರಣ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅನುಮಾನ. ಹಾಗೊಂದು ವೇಳೆ ಅವರು ಭಾಗವಹಿಸಲೇಬೇಕು ಎಂದಾದರೇ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಮುಖ್ಯಮಂತ್ರಿ ಗೈರಿನಲ್ಲಿ ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿರುವವರು ಧ್ವಜ ಹಾರಿಸುವುದು ವಾಡಿಕೆ.
ರಾಜ್ಯದಲ್ಲಿ ಈಗ ಒಬ್ಬರಲ್ಲ ಮೂವರು ಡಿಸಿಎಂಗಳಿದ್ದಾರೆ. ಮೂರೂ ಡಿಸಿಎಂಗಳು ಕಳೆದೊಂದು ವಾರದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಅವರೂ ಸಹ ಕ್ವಾರಂಟೈನ್‍ಗೆ ಒಳಪಡಲಿದ್ದಾರೆ. ಅವರ ಪರೀಕ್ಷಾ ವರದಿ ಮೇಲೆ ಎಷ್ಟು ದಿನ ಕ್ವಾರಂಟೈನ್‍ಎಂಬುದು ತಿಳಿಯಲಿದೆ. ಒಂದು ವೇಳೆ ಅವರೂ 16ರ ತನಕ ಕ್ವಾರಂಟಿಗೆ ಒಳಪಟ್ಟರೇ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜ ಯಾರು ಹಾರಿಸಬೇಕು ಎಂಬ ಬಗ್ಗೆ ಅಧಿಖಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.
ತಾವೂ ಸೇರಿದಂತೆ ಡಿಸಿಎಂಗಳು ಅಲಭ್ಯ ಎಂದಾದಲ್ಲಿ ಸಿಎಂ ತಮ್ಮ ಸಂಫುಟದ ಹಿರಿಯ ಸಚಿವರಿಗೆ ಸಾಂವಿಧಾನಿಕ ಕಾರ್ಯ ನೆರವೇರಿಸುವಂತೆ ಕೇಳಬಹುದಾಗಿದೆ.
ಈ ಮಧ್ಯೆ ಸಿಎಂ ಅಧಿಕೃತ ನಿವಾಸಕ್ಕೆ ನಾವೀಗ ಗೃಹ ಕ್ವಾರಂಟೈನ್‍ನಲ್ಲಿದ್ದೇವೆ, 16ನೇ ತಾರೀಖಿನವರೆಗೆ ಮನೆಗೆ ಭೇಟಿ ನೀಡದಿರಿ¿ ಎನ್ನುವ ಸ್ಟಿಕ್ಕರ್ ಅನ್ನು ಬಿಬಿಎಂಪಿ ಅಧಿಕಾರಿಗಳು ಅಂಟಿಸಿದ್ದಾರೆ.
ಇದೆಲ್ಲದರ ನಡುವೆ ಸಿಎಂ ಸಂಪರ್ಕದಲ್ಲಿದ್ದ ಸುಮಾರು 75 ಮಂದಿ ಅಧಿಕಾರಿ, ಶಾಸಕ, ಸಚಿವರಿಗೆ ಕೂಡಲೇ ಐಸೊಲೇಶನ್‍ಗೆ ಒಳಗಾಗಲು ಅಧಿಕಾರಿಗಳು ಸೂಚಿಸಿದ್ದಾರೆ ಎಂಬ ವರದಿಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೊರೋನಾ ಸೋಂಕಿಗೆ ಒಳಗಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ನೂರಾರು ಮಂದಿಯಲ್ಲಿ ಈ ಬೆಳವಣಿಗೆ ಆತಂಕ ಮೂಡಿಸಿದೆ.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಪರ್ಕಕ್ಕೆ ಬಂದಿದ್ದ ಐದಾರು ಸಚಿವರು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ರಾಜ್ಯಪಾಲರಾದಿಯಾಗಿ ಹಲವರು ಪರೀಕ್ಷೆಗೆ ಒಳಗಾಗಿದ್ದಾರೆ. ಶನಿವಾರ ಸಂಜೆಯಷ್ಟೇ ಬೆಂಗಳೂರಿನ ಪೆÇಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕಮಲ್ ಪಂತ್ ಒಂದೇ ದಿನಕ್ಕೇ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.
ಒಂದು ಮೂಲದ ಪ್ರಕಾರ ಸುಮಾರು ನೂರು ಮಂದಿ ಅಧಿಕಾರಿಗಳು, ಶಾಸಕರು ಸಚಿವರು ನಾನಾ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಬಿಎಸ್‍ವೈ ಅವರನ್ನು ಸಂಪರ್ಕಿಸಿದ್ದು ಅವರೆಲ್ಲರಲ್ಲಿಯೂ ಆತಂಕ್ಕೆ ಶುರುವಾಗಿದೆ.