ಬೆಳಗಾವಿ: ನಿರಂತರ ಸುರಿದ ಮಳೆಗೆ ಮನೆಗೋಡೆ ಕುಸಿದು ಪಕ್ಕದಲ್ಲಿ ನಿಲ್ಲಿಸಿದ ಕಾರ್ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡ ಘಟನೆ ನಗರದಲ್ಲಿ ಬಸವನಗಲ್ಲಿಯಲ್ಲಿ ನಡೆದಿದೆ.
ಮಹಾವೀರ ಕೊಟಾರಿ ಎಂಬುವವರಿಗೆ ಸೇರಿದ ಕಾರು ಜಖಂಗೊಂಡಿದೆ. ಜಿಲ್ಲೆಯಾದ್ಯಂತ ಮಳೆಯಿಂದ ಪ್ರವಾಹದ ಭೀತಿ ಉಂಟಾಗಿದೆ. ನಗರದ ರಸ್ತೆ ಜಲಾವೃತವಾಗಿದ್ದು, ನೀರುತುಂಬಿದ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಹಾಗೂ ಖಾನಾಪೂರದ ಕೆಲ ಬಡಾವಣೆಗಳಿಗೂ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆಯಿಂದ ನೀರು ಹೊರ ತೆಗೆಯಲು ಹರಸಾಹಸ ಪಡುವಂತಾಗಿದೆ.
Laxmi News 24×7