ಹುಬ್ಬಳ್ಳಿ: ಬಿಜೆಪಿ ಮುಖಂಡನೊಬ್ಬ ಗುಟ್ಟಾಗಿ ಎರಡನೇ ಮದುವೆಯಾಗಿದ್ದು, ಪಡೆದುಕೊಂಡ ಹಣವನ್ನು ವಾಪಸ್ ಕೇಳಿದ್ದಕ್ಕೆ ಪತ್ನಿಯನ್ನೇ ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಬಿಜೆಪಿ ಮುಖಂಡ, ಆತನ ಮೊದಲ ಪತ್ನಿ ಮತ್ತು ಮಕ್ಕಳು ಸೇರಿಕೊಂಡು ಎರಡನೇ ಪತ್ನಿ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ.
ಮೊದಲ ಪತ್ನಿ ಇದ್ದರೂ ಆಕೆ ಮೃತಪಟ್ಟಿರುವುದಾಗಿ ನಂಬಿಸಿದ್ದ ಬಿಜೆಪಿ ಮುಖಂಡ 2012 ರಲ್ಲಿ ಎರಡನೇ ಮದುವೆಯಾಗಿದ್ದಾನೆ. ಮೊದಲ ಪತ್ನಿಯ ಕಣ್ಣುತಪ್ಪಿಸಿ ಕೆಲ ಸಮಯ ಎರಡನೇ ಪತ್ನಿಯೊಂದಿಗೆ ಸಂಸಾರ ನಡೆಸಿದ್ದಾನೆ. ಎರಡನೇ ಪತ್ನಿಯ ನಿವೇಶನ ಮಾರಿಸಿ 28 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ ಬಿಜೆಪಿ ಮುಖಂಡ ಮತ್ತೆ ಮೊದಲ ಪತ್ನಿಯ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಗೆ ಹೋಗಿ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.ಮೊದಲ ಪತ್ನಿ ಮನೆಗೆ ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದು, ಎರಡನೇ ಪತ್ನಿ ಮಹಿಳಾ ಠಾಣೆ ಪೊಲೀಸರಿಗೆ ಹಾಗೂ ಈ ಹಿಂದೆ ಕಲಘಟಗಿ ಠಾಣೆ ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
Laxmi News 24×7