Breaking News

ಯಾರಿಗೂ ಯಾವುದೇ ಪಾಸ್ ನೀಡಿಲ್ಲ’ – ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ

Spread the love

ಬೆಂಗಳೂರು: ಏಳು ದಿನ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ಕಮೀಷನರ್ ಭಾಸ್ಕರ್ ರಾವ್ ಕಂಟ್ರೋಲ್ ರೂಂ ಮೂಲಕ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಇಂದಿನಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆಯವರೆಗೆ ಲಾಕ್‍ಡೌನ್ ಇರುತ್ತೆ. ಈ ವೇಳೆ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಾಕ್‍ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು ಎಂದೂ ಸೂಚನೆ ಕೊಟ್ಟಿದ್ದಾರೆ.

ಕಮೀಷನರ್ ಸೂಚನೆಗಳು:
* ಲಾಕ್ ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು.
* ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು.
* ಇದು ಏಳು ದಿನದ ಲಾಕ್ ಡೌನ್ ಅಗಿದ್ದು ಯಾರಿಗೂ ಯಾವುದೇ ಪಾಸ್ ಕೊಡ್ತಿಲ್ಲ.
* ಪೊಲೀಸರು ತಪಾಸಣೆ ವೇಳೆ ಅವರ ಐಡಿ ಕಾರ್ಡ್ ಪರಿಶೀಲನೆ ಮಾಡಿ ಬಿಡಬೇಕು.
* ಸರ್ಕಾರ ಬೆಳಗಿನ ಜಾವ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಕೊಟ್ಟಿದೆ.
* ಆ ಬಳಿಕ ಮೆಡಿಕಲ್ ಸಂಬಂಧಪಟ್ಟವು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಬೇಕು.
* ಯಾರ ಜೊತೆ ಜಗಳ ಮಾಡಬಾರದು, ಅವಾಚ್ಯ ಶಬ್ದ ಬಳಸಬಾರದು.
* ಎಲೆಕ್ಟ್ರಾನಿಕ್ ಮೀಡಿಯಾ, ಫೋಟೋ ಜನರ್ಲಿಸ್ಟ್, ಪತ್ರಿಕೆ ವಿತರಕರ ಐಡಿ ಕಾರ್ಡ್ ಇದ್ದರೆ ಸಾಕು ಪಾಸ್ ಬೇಕಿಲ್ಲ.

* ಹಣ್ಣು ಹಂಪಲು ತರಕಾರಿ ಮಾರಾಟ ಮಾಡುವವರಿಗೆ ಪಾಸ್ ಬೇಡ. ಅದ್ರೆ ಅನವಶ್ಯಕವಾಗಿ ಓಡಾಡೋದಕ್ಕೆ ಬಿಡಬಾರದು.
* ಬ್ಯಾರಿಕೇಡ್ ಹತ್ರ ಕೆಲಸ ಮಾಡುವ ಪಿಸಿ, ಹೆಚ್‍ಸಿ ಮತ್ತು ಎಎಸ್‍ಐಗಳೇ ಕಮೀಷನರ್
* ಅನವಶ್ಯಕವಾಗಿ ಜಗಳ, ಚೆಕ್ ಮಾಡಬಾರದು, ಜನರ ಜೊತೆ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು..
* ಕೊರೊನಾದಿಂದ ಸಿಬ್ಬಂದಿ ಕೊರತೆ ಇದೆ. ಆದ್ದರಿಂದ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ಎಲ್ಲ ಸ್ಟೇಷನ್‍ಗೆ ಮ್ಯಾನೇಜ್ ಮಾಡುತ್ತಾರೆ. ಅವರನ್ನ ಕೆಲಸಕ್ಕೆ ಬಳಸಿಕೊಳ್ಳಬೇಕು. ನನಗೆ ಗೊತ್ತಿಲ್ಲ ಹಾಗೇ ಹೀಗೆ ಅನ್ನಬಾರದು..
* ಸ್ವಯಂಸೇವಕರಿಗೆ ಒಂದು ಜಾಕೆಟ್ ಮತ್ತು ಕ್ಯಾಪ್ ಕೊಡಲಾಗುವುದು.
* ಬ್ಯಾರಿಕೇಡ್ ಬಳಿ, ಕಂಪ್ಯೂಟರ್ ಆಪರೇಟಿಂಗ್, ಬಂದೋಬಸ್ತ್‌ಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಬಹುದು. ಸ್ವಯಂ ಸೇವಕರನ್ನು ಕಂಟೈನ್ಮೆಂಟ್ ಝೋನ್‍ಗೆ ಕರೆದುಕೊಂಡು ಹೋಗಬಾರದು.

ಇಂದಿನಿಂದ ಒಂದು ವಾರಗಳು ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತು. ಹೀಗಾಗಿ ಕೊರೊನಾ ಚೈನ್ ಕಟ್ ಮಾಡುವ ದೃಷ್ಟಿಯಿಂದ ಮತ್ತೆ ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ.

 


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ