ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ
ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ
ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ
ಆರ್ಥಿಕ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ
ಶಿವಲಿಂಗಪ್ರಭು ಹೂಗಾರ ಭರವಸೆ
ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ ಮಾಡಲಾಗಿದೆ.
ವಿಜಯಪುರ: ಇಲ್ಲಿನ ಹೋಟೆಲ್ ಗೋಲ್ಡನ್ ಹೈಟ್ಸ್‌ನಲ್ಲಿ ಇತ್ತೀಚೆಗೆ ಜರುಗಿದ ಅಖಿಲ ಕರ್ನಾಟಕ ರಾಜ್ಯ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ, ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಸಮಾಜದ ಸಂಘಟನೆಯನ್ನು ಬಲಪಡಿಸುವ ಮತ್ತು ಸಮುದಾಯದ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಎಲ್ಲರ ಸಮ್ಮತಿಯ ಮೇರೆಗೆ ಶಿವಲಿಂಗಪ್ರಭು ಹೂಗಾರ ಅವರಿಗೆ ಈ ಮಹತ್ತರ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ತಮ್ಮ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿಯನ್ನು ನೀಡಿದ ಸಮಾಜದ ಮುಖಂಡರಿಗೆ ಮತ್ತು ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಸಮಾಜದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಶ್ರೀ ಶಿವಲಿಂಗಪ್ರಭು ಹೂಗಾರ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
Laxmi News 24×7