ಚಿಕ್ಕೋಡಿ:ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಜಮೀನಿನಲ್ಲಿ ಎಕರೆಗೆ 180 ಟನ್ ಕಬ್ಬು ಬೆಳೆಸಿ ದಾಖಲೆ ನಿರ್ಮಿಸಿ,ಇತರ ರೈತರಿಗೆ ಮಾದರಿಯಾಗಿದ್ದಾರೆ.
ಮಾಜಿ ಶಾಸಕ ಶಾಮ ಘಾಟಗೆಯವರು ಕೇವಲ ಒಬ್ಬ ರಾಜಕಾರಣಿ ಆಗದೆ, ಕೃಷಿಯಲ್ಲೂ ಅಷ್ಟೇ ಆಸಕ್ತಿಯಿಂದ ಮುತುವರ್ಜಿ ವಹಿಸಿ ಎಕರೆಗೆ 180 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದಾರೆ.
ಈ ಹಿಂದೆ ಒಂದು ಎಕರೆ ಜಮೀನಿನಲ್ಲಿ 40 ಟನ್ ಹಸಿ ಮೆಣಸಿನಕಾಯಿ, ಒಂದು ಎಕರೆ ಜಮೀನಿನಲ್ಲಿ 28ಟನ್ ಸೀಮಲಾ ಮೆಣಸಿನಕಾಯಿ ಜೊತೆಗೆ ಎಕರೆ ಪೂರ್ತಿ ಪರೀಕ್ಷಣೆ ಮಾಡಿದಾಗ 130ಟನ್ ಬೆಳೆ ಬೆಳಿದ್ದರು.”ಇಸ್ರೇಲ್ ರಿಂಗ್ ಫೀಟ್ ಮಾದರಿಯ ಮೂಲಕ ಚೆನ್ನಾಗಿ ನೀರು, ಗೊಬ್ಬರ ನಿರ್ವಹಣೆ ಮಾಡುವ ಮೂಲಕ ಒಂದು ಕಬ್ಬು 56ಗಣಕಿ, 26ಅಡಿ ಉದ್ದ ಹಾಗೂ ಸರಾಸರಿ 4-5ಕೆಜಿ ತೂಕದೊಂದಿಗೆ ಎಕರೆಗೆ 180ಟನ್ ಬೆಳೆಯಲು ಅನುಕೂಲವಾಗಿದೆ ಎಂದು ವ್ಯವಸ್ಥಾಪಕ ಅನೀಲ ಟೊಣ್ಣೆ ತಿಳಿಸಿದ್ದಾರೆ.
ಬೈಟ್-ಅನೀಲ ಟೊಣ್ಣೆ,ಮಾಜಿ ಶಾಸಕ ಶಾಮ ಘಾಟಕೆಯ ವ್ಯವಸ್ಥಾಪಕ
ಕಬ್ಬು ಕೃಷಿಯಲ್ಲಿ ಆಧುನಿಕ ತಂತ್ರಗಳನ್ನು ಬಳಸುವ ಮೂಲಕ ಸಾವಯವ ಸ್ವಾಭಾವಿಕ ಗೊಬ್ಬರ, ಹಾಗೂ ಹಸುವಿನ ಸಗಣಿ, ಗೋಮೂತ್ರ ಬಳಸಿ ಹೊಸ ದಾಖಲೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸರಿಯಾದ ಕಬ್ಬಿನ ನಿರ್ವಹಣೆ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ.
ಕಬ್ಬು ಕೃಷಿಯನ್ನು ಸಾಮಾನ್ಯವಾಗಿ ಸರಳ ಮತ್ತು ಕಡಿಮೆ ತೀವ್ರತೆಯ ಬೆಳೆ ಸೋಮಾರಿ ರೈತನ ಬೆಳೆ ಎಂದು ಜನ ಮಾತನಾಡಿಕೊಳ್ಳುತ್ತಾರೆ, ಆದರೆ ಈ ಕಲ್ಪನೆಯನ್ನು ತಪ್ಪೆಂದು ಸಾಬೀತುಪಡಿಸುವಲ್ಲಿ ಮಾಜಿ ಶಾಸಕ ಎಸ್.ಬಿ. ಘಾಟಗೆಯವರ ಜಮೀನಿನಲ್ಲಿ ಆಧುನಿಕ ತಂತ್ರಗಳನ್ನು ಬಳಸುವ ಮೂಲಕ ಎಕರೆಗೆ 180 ಟನ್ ಕಬ್ಬು ಉತ್ಪಾದಿಸಿ ಕಬ್ಬು ಕೃಷಿ ಸೋಮಾರಿ ರೈತರಿಗೆ ಮಾತ್ರವಲ್ಲದೆ ಕಷ್ಟಪಟ್ಟು ದುಡಿದು ತಮ್ಮ ಬೆಳೆಗಳನ್ನು ಸರಿಯಾಗಿ ನಿರ್ವಹಿಸುವವರಿಗೆ ವರದಾನವಾಗಲಿದೆ ಎಂದು ಅವರು ಪ್ರತ್ಯಕ್ಷವಾಗಿ ತೋರಿಸಿದ್ದಾರೆ.
ಈ ಬೆಳೆ ನೋಡಲು ಸುತ್ತಮುತ್ತಲಿನ ರೈತರು, ರಾಜಕಾರಣಿಗಳಾದ ರಮೇಶ ಜಾರಕಿಹೊಳಿ, ರಾಜು ಕಾಗೆ, ಶಶಿಕಾಂತ ನಾಯಿಕ, ಸೇರಿದಂತೆ ವಿವಿಧ ಕಾರ್ಖಾನೆ ಅಧಿಕಾರಿಗಳು ಭೇಟಿ ನೀಡಿ ಕಬ್ಬು ಬೆಳೆ ಪದ್ಧತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಎಸ್.ಬಿ. ಘಾಟಗೆ ಮತ್ತು ಅವರ ಮಗ ರಾಜ ಘಾಟಗೆ ಅವರ ಎಲ್ಲಾ ಕೃಷಿ ಪ್ರಯತ್ನಗಳಲ್ಲಿ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ರೈತರು ಆಧುನಿಕ ತಂತ್ರಗಳನ್ನು ಅಳವಡಿಸಿಕೊಂಡು ಸರಿಯಾಗಿ ಕೃಷಿ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪ್ರಜೀತ ರೇಡಕರ, ಶಾಮ ಘಾಟಗೆಯವರ ಡಾ.ಬಿ.ಆರ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಎ.ಎಸ.ಟೊಣ್ಣೆ, ಎಸ್.ಪಿ.ಕಾಂಬಳೆ, ಎಸ.ಎಸ.ಭಜಂತ್ರಿ ಸರ ಇತರರು ಉಪಸ್ಥಿತರಿದ್ದರು.
Laxmi News 24×7