Breaking News

ಈಗ 30 ದಿನಗಳ ಕಾಲ ರಜೆ ಬಂದಿರುವ ಯೋಧ 14 ದಿನಗಳ ಕಾಲ ಒಂಟಿಯಾಗಿ ಕ್ವಾರಂಟೈನ್ ನಲ್ಲಿ

Spread the love

ಗದಗ: ಇವರ ಹೆಸರು ಪ್ರಕಾಶ್ ಹೈಗರ್, ಗದಗ ಜಿಲ್ಲೆಯ ವಿಚಿತ್ರ ಹೆಸರು ಹೊಂದಿರುವ ಅಂತೂರು ಬೆಂತೂರು ಗ್ರಾಮದವರು. ಭಾರತೀಯ ಸೇನೆಯಲ್ಲಿರುವ ಇವರು ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದ್ದು, ಒಂದು ತಿಂಗಳ ರಜೆಯ ಮೇಲೆ ತವರಿಗೆ ಬಂದಿದ್ದಾರೆ. ಬರುವದಕ್ಕೂ ಮೊದಲು ತಾವು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು, ನೆಗೆಟಿವ್ ಆಗಿರುವ ಕುರಿತು ಸರ್ಟಿಫಿಕೇಟ್ ಕೂಡ ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ. ಎರಡು ವರುಷಗಳ ನಂತರ ತಮ್ಮ 15 ಸದಸ್ಯರ ಅವಿಭ್ಯಕ್ತ ಕುಟುಂಬ ಸೇರುತ್ತಿರುವ ಅವರು ತಮ್ಮವರನ್ನು ಕಾಣುವ ಬಯಕೆ ಬದಿಗಿಟ್ಟು, ಕುಟುಂಬದ, ಗ್ರಾಮದ ಹಿತ ಬಯಸಿ, ಗ್ರಾಮ ಪ್ರವೇಶಿಸದೆ ಹೊರವಲಯದ ಹೊಲವೊಂದರಲ್ಲಿ ಸ್ವಯಂ ಕ್ವಾರಂಟೈನ್ ಗೊಳಗಾಗಿದ್ದಾರೆ.

ಜುಲೈ 3ರಂದು ಬಂದಿರುವ ಇವರಿಗೆ ಇಲ್ಲಿಯೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಕೋವಿಡ್ ಕಟ್ಟಳೆ ಬದಲಾಗಿ 14 ದಿನಗಳ ಹೋಮ ಕ್ವಾರಂಟೈನ್ ಬದಲಾಗಿ ಏಳು ದಿನಗಳಿಗಿಳಿಸಿದರೂ ಆರೋಗ್ಯ ಇಲಾಖೆ‌ 14 ದಿನ ಹೋಮ್ ಕ್ವಾರಂಟೈನ್ ಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬದ ಸದಸ್ಯರಾಗಿರುವ ಯೋಧ ಗ್ರಾಮಕ್ಕೆ 2 ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಅಲ್ಲೇ ವಾಸವಾಗಿದ್ದಾರೆ.

ಮಕ್ಕಳು, ಪತ್ನಿ ಸೇರಿದಂತೆ ತಂದೆ ತಾಯಿ ಸೇರಿದಂತೆ 15 ಕ್ಕೂ ಹೆಚ್ಚು ಜನರು ಮನೆಯಲ್ಲಿದ್ದಾರೆ. ಹಾಗೆಯೇ ಗ್ರಾಮದ ಜನರಿಗೆ ತಮ್ಮಿಂದ ತೊಂದರೆಯಾಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸಹೋದರನಿಗೆ ಹೇಳಿ ಟ್ರ್ಯಾಕ್ಟರ್ ಟ್ರಾಲಿ ಮೇಲೆ ಪ್ಲಾಸ್ಟಿಕ್ ಕವರ್ ಹಾಕಿಸಿಕೊಂಡು ಅದರ ಸುತ್ತು ಬೇಲಿ ಹಾಕಿಕೊಂಡು ಕಳೆದ 5 ದಿನಗಳಿಂದ ತಮ್ಮಷ್ಟಕ್ಕೇ ತಾವೇ ದಿಗ್ಭಂಧನ ಹಾಕಿಕೊಂಡಿದ್ದಾರೆ.

ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ, ಭಾರತ-ಚೀನಾ ಗಡಿಯಾದ ಲಡಾಕ್​​ ಯೋಧ ಭೂಮಿ ಸೇರಿದಂತೆ, ನಾನಾ ಕಡೆ ಕೆಲಸ ನಿರ್ವಹಣೆ ಮಾಡಿದ್ದಾರೆ.

ಈಗ 30 ದಿನಗಳ ಕಾಲ ರಜೆ ಬಂದಿರುವ ಯೋಧ 14 ದಿನಗಳ ಕಾಲ ಒಂಟಿಯಾಗಿ ಕ್ವಾರಂಟೈನ್ ನಲ್ಲಿದ್ದಾರೆ. ಕ್ವಾರಂಟೈನ್ ಸಮಯ ಮುಗಿದ ಬಳಿ ತನ್ನ ಮಕ್ಕಳು ಹಾಗೂ ಕುಟುಂಬ ಭೇಟಿ ಮಾಡಲಿದ್ದಾರೆ. ಯೋಧನ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Spread the love

About Laxminews 24x7

Check Also

“ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ..:C.M.

Spread the loveಗದಗ: ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ ಎಂದು ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ