Breaking News

ಸುಮಲತಾ ಅವರು ಮಾಸ್ಕ್‌ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.ಜನಪ್ರತಿನಿಧಿಗಳು, ಬೆಂಬಲಿಗರು ಸೇರಿದಂತೆ ಸಾರ್ವಜನಿಕರಿಗೂ ಆತಂಕ

Spread the love

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ ಅವರು ತಮಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ನಿನ್ನೆಯಷ್ಟೇ ದೃಢಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದ ಅವರು, ತಾವು ಶೀಘ್ರದಲ್ಲಿ ಗುಣಮುಖರಾಗಿ ಬರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಅನೇಕ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರಿಗೆ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಇಷ್ಟೇ. ಇದೇ 4ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಕಾರ್ಯಕ್ರಮ ಅದಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಮಂಡ್ಯ ಡಿಸಿ ಸೇರಿ ಹಲವರು ಗಣ್ಯರು ಉಪಸ್ಥಿತರಿದ್ದರು.

ಅದರ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸುಮಲತಾ ಅವರು ಮಾಸ್ಕ್‌ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.
ಇದರಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಡ್ಯದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಬೆಂಬಲಿಗರು ಸೇರಿದಂತೆ ಸಾರ್ವಜನಿಕರಿಗೂ ಆತಂಕ ಶುರುವಾಗಿದೆ.


Spread the love

About Laxminews 24x7

Check Also

10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು ಎಂದು ಪುಸಲಾಯಿಸಿ 5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿ

Spread the love ಮಂಡ್ಯ :- 5 ಲಕ್ಷ ರೂಪಾಯಿ ಹಣಕೊಟ್ಟರೆ 10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ