Breaking News

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ

Spread the love

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ
ಚಿಕ್ಕೋಡಿ: ಒಂದು ಮನೆ ಹಾಗೂ ಕಾರ ದರೋಡೆ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದಲ್ಲಿ ನಡೆದಿದೆ.
ಕಾರ್ ಗಾಜು ಒಡೆದು ಬ್ಯಾಗನಲ್ಲಿದ್ದ 6 ಸಾವಿರ ರೂ ಕಳ್ಳತನ ಮಾಡಲಾಗಿದೆ. ಒಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು ಕಳ್ಳತನ ಮಾಡಿ ಅಲ್ಲಿಂದ ಸ್ವಲ್ಪ ಅಂತರದಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 5 ಸಾವಿರ ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಳ್ಳರು ನಿರಾತಂಕವಾಗಿ ಕಳ್ಳತನ ಮಾಡುವ ದೃಶ್ಯಗಳು ಚಿಕ್ಕೋಡಿ ಪಟ್ಟಣದ ಜನರಲ್ಲಿ ಆತಂಕ ಹುಟ್ಟಿಸಿದೆ. ಆದಷ್ಟು ಬೇಗ ಕಳ್ಳರನ್ನ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಹೊಸ ಕಟ್ಟಡ ಉದ್ಘಾಟಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the love ಚಿಕ್ಕೋಡಿ :ನೂತನವಾಗಿ ನಿರ್ಮಾಣವಾದ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಉದ್ಘಾಟಿಸಿದರು. ಬಳಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ