ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ
ಸವದತ್ತಿ:ರಾಯಚೂರಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಖಾ ಬಡಿಗೇರ್ ಅವರು ಬರೆದಿರುವ ಎಲ್ಲಮ್ಮನ ಜೀವನ ಚರಿತ್ರೆ ಕುರಿತು ಉಧೋ ಉದೋ ಪುಸ್ತಕವನ್ನು ಇಂದು ಎಲ್ಲಮ್ಮನ ದೇವಸ್ಥಾನದ ಸನ್ನಿಧಿಯಲ್ಲಿ ಬೆಳಗಾವಿ
ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಅಶೋಕ್ ಬಿ ದುಡಗುಂಟಿ ಲೋಕಾರ್ಪಣೆ ಮಾಡಿದರು.
ಎಲ್ಲಮ್ಮ ದೇವಸ್ಥಾನದ ಶ್ರೀ ರೇಣುಕಾದೇವಿಯ ಜೀವನ ಚರಿತ್ರೆಯನ್ನು ಬರೆದಿರುವ ಪುಸ್ತಕವು ಭಕ್ತರಿಗೆ ಅನುಕೂಲವಾಗಿದೆ. ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಕೃತಿಕರಾರದ ರೇಖಾ ಬಡಿಗೇರ್.
ಹಿರಿಯ ಪ್ರಧಾನ ಅರ್ಚಕರಾದ ಕೆ ಎಸ್ ಯಡಿಯೂರಯ್ಯ. ಉಪ ಕಾರ್ಯದರ್ಶಿಗಳಾದ ನಾಗರತ್ನ ಚೋಳಿನ. ಮಾರುತಿ ಬಡಿಗೇರ್ ಹಾಗೂ ವೈಶಾಲಿ ಸುತಾರ ಬೆಳಗಾವಿ.
ಅಶೋಕ ಲಿಂಗನಗೌಡರ ಇನ್ನಿತರರಿದ್ದರು.
ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಗಳಿಗೆ ಸನ್ಮಾನಿಸಲಾಯಿತು.