ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಆಗಾಗ ಬೀಳುತ್ತಿರುವ ಮಳೆ ಕೂಡ ಜನರು ಹೊರಗಡೆ ಓಡಾಡದಂತೆ ತಡೆ ಒಡ್ಡುತ್ತಿದೆ.
ಸಾರಿಗೆ ಬಸ್, ಆಟೊರಿಕ್ಷಾಗಳು ರಸ್ತೆಗಿಳಿಯಲಿಲ್ಲ. ನಗರ ಹಾಗೂ ಕೇಂದ್ರ ಸಾರಿಗೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ರಸ್ತೆಗಳಲ್ಲೂ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ. ತುರ್ತು ಕೆಲಸಗಳಿಗೆ ಹೋಗುವವರಿಗೆ ಮಾತ್ರ ಪೊಲೀಸರು ಅವಕಾಶ ಕೊಡುತ್ತಿದ್ದಾರೆ.

ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಕೋವಿಡ್-19 ಹರಡದಂತೆ ನೋಡಿಕೊಳ್ಳಲು ಜಾರಿಗೊಳಿಸಿರುವ ಲಾಕ್ ಡೌನ್ ಸಾರ್ವಜನಿಕರಿಂದ ಉತ್ಮ ಸ್ಪಂದನೆ ದೊರೆತಿರುವುದರಿಂದ ವಾರಾಂತ್ಯದ ಚಟುವಟಿಕೆಗಳು ಮಂಕಾಗಿವೆ.
Laxmi News 24×7