Breaking News

ಶಾಸಕರ ಜೊತೆಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಸುರ್ಜೇವಾಲರಿಂದ ಮಿನಿಸ್ಟರ್​​​ ಜೊತೆ One to One ಸಭೆ

Spread the love

ಬೆಂಗಳೂರು: ಶಾಸಕರೊಟ್ಟಿಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಚಿವರ ಜೊತೆ ಒನ್ ಒನ್ ಸಭೆ ಆರಂಭಿಸಿದ್ದಾರೆ.‌ ಸಚಿವರುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋ ಶಾಸಕರ ಆರೋಪದ ಬೆನ್ನಲ್ಲೇ ಸಚಿವರ ಜೊತೆ ಸಭೆಗೆ ನಡೆಸುತ್ತಿರೋ ಸುರ್ಜೇವಾಲ ಸೋಮವಾರ ನಾಲ್ವರು ಸಚಿವರ ಜೊತೆ ಮಾತುಕತೆ ನಡೆಸಿದರು.

ಶಾಸಕರ ಜೊತೆಗಿನ ಸಭೆಯಲ್ಲಿ ಸಚಿವರು ಸರಿಯಾಗಿ ಸ್ಪರ್ಧಿಸುತ್ತಿಲ್ಲ, ಉಸ್ತುವಾರಿ ಸಚಿವರುಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ತಿಲ್ಲ, ನಮ್ಮ ಲೆಟರ್ ಗಳಿಗೆ ಬೆಲೆ ಇಲ್ಲ ಎಂದು ದೂರುಗಳ ಸುರಿಮಳೆಯನ್ನೇ ಹರಿಸಿದರು. ಯಾವಾಗ ದೂರು ಗಳು ಹೆಚ್ಚಾದವೋ ಕೂಡಲೇ ಎಚ್ಚೆತ್ತ ಸುರ್ಜೆವಾಲ ಸಚಿವರ ಜೊತೆ ಇದೀಗ ಒನ್ ಟು ಒನ್ ಮೀಟಿಂಗ್ ಮಾಡ್ತಾ ಇದ್ದಾರೆ. ಸೋಮವಾರದಿಂದ ಮೂರು ದಿನಗಳ ಕಾಲ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಯಾರ ಮೇಲೆ ಹೆಚ್ಚಿನ ದೂರು ಕೇಳಿ ಬಂದಿತ್ತು ಅಂಥ ಸಚಿವರುಗಳ ಜೊತೆಗೆನೇ ಸುರ್ಜೇವಾಲ ಮೊದಲ ಸುತ್ತಿನ ಸಭೆ ನಡೆಸಿದ್ದಾರೆ.

ನನ್ನ ವಿರುದ್ಧ ಯಾವುದೇ ಎಂಎಲ್​ಎ ದೂರು ನೀಡಿಲ್ಲ: ಸೋಮವಾರ ಸಚಿವರಾದ ಬೈರತಿ ಸುರೇಶ್, ರಹಿಂ ಖಾನ್, ಜಮೀರ ಅಹ್ಮದ್ ಖಾನ್, ಹೆಚ್.ಸಿ.ಮಹಾದೇವಪ್ಪ ಜೊತೆ ಒನ್ ಟು ಒನ್ ಸಭೆ ನಡೆಸಿದರು. ಶಾಸಕರ ದೂರುಗಳ ಬಗ್ಗೆ ಸುರ್ಜೇವಾಲ ಸಚಿವರ ಗಮನಕ್ಕೆ ತಂದಿದ್ದು, ಸರಿಯಾಗಿ ಸ್ಪಂದಿಸುವಂತೆ ಸಲಹೆ ನೀಡಿದ್ದಾರೆ. ಸಭೆ ಬಳಿಕ ಮಾತನಾಡಿದ ಸಚಿವ ಬೈರತಿ ಸುರೇಶ್, ಇದು ಮೌಲ್ಯಮಾಪನದ ಸಭೆ ಅಲ್ಲ. ನನ್ನ ಮೇಲೆ ಯಾವುದೇ ಶಾಸಕರು ದೂರು ನೀಡಿಲ್ಲ. ಅಭಿವೃದ್ಧಿ ವಿಚಾರ ಮಾತ್ರ ಕೇಳಿದ್ದಾರೆ ಎಂದಿದ್ದಾರೆ.

ಸುರ್ಜೇವಾಲ ಭೇಟಿ ಬಗ್ಗೆ ಜಮೀರ್​ ಅಹಮ್ಮದ್​ ಖಾನ್​ ಹೇಳಿದ್ದಿಷ್ಟು: ಇತ್ತ ತೀವ್ರ ಆರೋಪ ಕೇಳಿ ಬಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ಜೊತೆ ಕೂಡ ಒನ್ ಟು ಒನ್ ಮೀಟಿಂಗ್ ಸುರ್ಜೇವಾಲ ನಡೆಸಿದರು. ಮನೆ ಹಂಚಿಕೆ ವಿಚಾರದಲ್ಲಿ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಸುರ್ಜೇವಾಲ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್ ಅಹಮದ್, ಸಚಿವರಲ್ಲಿ ಯಾರಾದ್ರೂ ತುಂಬಾ ಒಳ್ಳೆಯ ಕೆಲಸ ಮಾಡಿದ್ದರೆ ಅದು ನೀವೇ ನಿಮಗೆ ಅವಾರ್ಡ್ ಕೊಡಬೇಕು. ಒಳ್ಳೆಯ ಕೆಲಸ ಮಾಡ್ತಾ ಇದ್ದೀರ ಎಂದು ಬೆನ್ನುತಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರು ಮನೆಗಳ ಹಂಚಿಕೆ ಬಗ್ಗೆ ಚರ್ಚೆಯಾಯ್ತು. ಶಾಸಕರು ಕೊಟ್ಟ ಬೇಡಿಕೆ ನನಗೆ ಕೊಟ್ಟಿದ್ದಾರೆ. ಸುರ್ಜೇವಾಲ ಮಾತಿನಿಂದ ಖುಷಿಯಾಗಿದೆ. ಯಾವ ಶಾಸಕರು ನನ್ನ ಮೇಲೆ ಆರೋಪ‌ ಮಾಡಿಲ್ಲ. ಸುರ್ಜೇವಾಲ ಯಾವತ್ತು ಸುಳ್ಳು ಹೇಳಲ್ಲ. ತಪ್ಪು ಇದ್ರೆ ತಪ್ಪು ಅಂತಾರೆ. ಶಾಸಕರು ಮನೆ ಕೊಡಿ ಅನ್ನೋ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬಳಿ ಟಾರ್ಗೆಟ್ ಇಲ್ಲ. 2 ವರ್ಷದಿಂದ ಒಂದು ಮನೆನೂ ಕೊಟ್ಟಿಲ್ಲ. ಸಮಿಶ್ರ ಸರ್ಕಾರದಲ್ಲೂ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಆಗಲಿ ಒಂದು ಮನೆ ಕೊಟ್ಟಿಲ್ಲ. ನಾವು 2 ವರ್ಷದಿಂದ ಮನೆಗಳ ಹಂಚಿಕೆ ಮಾಡಿಲ್ಲ. ಮುಂದಿನ ವರ್ಷ ಹೊಸ‌ ಮನೆ ಕೊಡುವುದಾಗಿ ಹೇಳಿದ್ದೇನೆ. ಬಿ.ಆರ್.ಪಾಟೀಲ್ ಆರೋಪ ವಿಚಾರ ಪ್ರಸ್ತಾಪ ಆಗಿಲ್ಲ ಎಂದರು.

ಮಂಗಳವಾರ ಹಾಗೂ ಬುಧವಾರ ಕೂಡ ಸಚಿವರುಗಳ ಜೊತೆ ಒನ್ ಟು ಒನ್ ಸಭೆ ಮುಂದುವರೆಯಲಿದೆ. ಇತ್ತ ಸಚಿವ ಸಂಪುಟ ಪುನರ್ ರಚನೆ ಅನ್ನೋ ಚರ್ಚೆ ಬೆನ್ನಲ್ಲೇ ಈ ಸಭೆ ಸಾಕಷ್ಟು ಮಹತ್ವ ಪಡೆಯುತ್ತಿದೆ.


Spread the love

About Laxminews 24x7

Check Also

ಸಿಗ್ನಲ್‌ನಲ್ಲಿ ದಾರಿ ಬಿಡದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಮೂವರಿಂದ ಹಲ್ಲೆ

Spread the loveಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ದಾರಿ ಬಿಡಲಿಲ್ಲ ಎಂದು ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ