ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ
ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯ ರಾತ್ರಿ ಎರಡು ಗಂಟೆ ಸುಮಾರಿಗೆ ಎಗ್ ರೈಸ್ ಅಂಗಡಿಯಲ್ಲಿ ಸಿಲೆಂಡರ್ ಬ್ಲಾಸ್ಟ್ ಆಗಿದ್ದು ದೊಡ್ಡ ದುರಂತ ತಪ್ಪಿದೆ.
ಹುಬ್ಬಳ್ಳಿ ಪದ್ಮ ಟಾಕೀಸ್ ಹತ್ತಿರ ಎಗ್ ರೈಸ್ ಅಂಗಡಿಯಲ್ಲಿ ನಿನ್ನೆ ಮಧ್ಯ ರಾತ್ರಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು. ಅಂಗಡಿಯಲ್ಲಿ ಯಾರು ಇಲ್ಲದಿದ್ದರಿಂದ.
ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಸಿಲಿಂಡರ್ ಬ್ಲಾಸ್ಟ್ ಆದ ರಭಸಕ್ಕೆ ಅಂಗಡಿಯ ಮೇಲ್ಚಾವಣಿ ಹಂಚುಗಳು ಪುಡಿ ಪುಡಿಯಾಗಿವೆ.
ಇದು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾಗಿದ್ದು. ಸ್ಥಳಕ್ಕೆ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.