Breaking News

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ

Spread the love

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ
ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದಿದ್ದ ಹಾಗೂ ಬಸ್ ನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಎಗರಿಸಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಳ್ಳರನ್ನು ಹಾರೂಗೇರಿ ಪೊಲೀಸರು ಬಂಧಿಸಿ ಬಂಗಾರ ವಶಪಡಿಸಿಕೊಂಡಿದ್ದಾರೆ
ಬೆಳಗಾವಿ ಶಹಪುರ್ ನಿವಾಸಿ ಪದ್ಮಾವತಿ ರಾಜೇಂದ್ರ ಕುಡಚಿ ಹಾರೋಗೇರಿ ಕ್ರಾಸ್ ನಿಂದ ಮಿರಜಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಬ್ಯಾಗಿನಲ್ಲಿಟ್ಟಿದ್ದ 3.60.000 ಬೆಲೆಬಾಳುವ ಬಂಗಾರದ ತಾಳಿಯನ್ನು ಕದ್ದು ಗದ್ದಲದಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದ
ಈ ಕುರಿತು ಹಾರೋಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಹಿನ್ನೆಲೆಯಲ್ಲಿ ಪಿಎಸ್ಐ ಮಾಳಪ್ಪ ಪೂಜಾರಿ ಅವರ ನೇತೃತ್ವದ ತಂಡ
ಆರೋಪಿ ಚಿಕ್ಕೋಡಿಯ ಕುಶಪ್ಪ ತಳವಾರನನ್ನು ಬ ಬಂಧಿಸಿ ಬಂಗಾರ ವಶಪಡಿಸಿಕೊಂಡಿದ್ದಾರೆ
ಮತ್ತೊಂದು ಪ್ರಕರಣದಲ್ಲಿ
ಹಿಡ್ಕಲ್ಲದ ರುಕ್ಬವ್ವ ಕಾಂಬಳೆ ಎಂಬ ಮಹಿಳೆಗೆ ಬ್ಯಾಂಕ್ ನಲ್ಲಿ ನಿಮ್ಮ ಹೆಸರಿಗೆ 40,000 ಹಣ ಬಂದಿದ್ದು ಅದನ್ನು ತೆಗೆಸಿಕೊಡುತ್ತೇನೆ ಅಂತ ನಂಬಿಸಿ ಬ್ಯಾಂಕಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಅವರನ್ನು ಪುಸಲಾಯಿಸಿ ಕೊರಳಲ್ಲಿದ್ದ
ಬೋರ್ಮಾಳ ಸರವನ್ನು ಇಸಿದುಕೊಂಡು ವಂಚಿಸಿ ಓಡಿ ಹೋಗಿದ್ದ ಕೊಲ್ಹಾಪುರದ ದಸ್ತಗಿರಿ ಗುಲಾಬ್ ಶೇಖ ಎಂಬ ಆರೋಪಿಯನ್ನು ಪಿಎಸ್ಐ ಶಿವಾನಂದ ಕಾರಜೋಳ್ ಮತ್ತು ತಂಡ ಬಂಧಿಸಿದೆ. ಇಷ್ಟೇ ಅಲ್ಲದೆ ಆರೋಪಿ ದಸ್ತಗೀರ, ಹಾರೂಗೇರಿ,ತೇರದಾಳ, ನಿಪ್ಪಾಣಿ, ಮೂಡಲಗಿ, ಕಾಗವಾಡ, ಅಥಣಿ, ಸಂಕೇಶ್ವರ, ಚಿಕ್ಕೋಡಿ ಸೇರಿದಂತೆ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿ ದಸ್ತಗಿರ್ನನ್ನು ಬಂಧಿಸಿರುವ ಪೊಲೀಸರು ಅವನಿಂದ ಆಭರಣ ನಗದು ಸೇರಿದಂತೆ ಒಟ್ಟು ಏಳು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿದ್ದರವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ್ ಗುಳೇದ ಶ

Spread the love

About Laxminews 24x7

Check Also

ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.

Spread the loveಬೆಳಗಾವಿ :ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ