ವಿಜಯಪುರ, ಜೂನ್ 23: ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರರನ್ನೇ (BY Vijayendra) ಮುಂದುವರಿಸಿದರೆ ತಾನು ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರಾಜ್ಯಾಧ್ಯಕ್ಷನಾಗಬಹುದು ಎಂದು ಹೇಳಲಾಗುತ್ತಿರುವ ಮುರುಗೇಶ್ ನಿರಾಣಿಯವರು ತನ್ನ ಬಗ್ಗೆ ಧೋರಣೆ ಬದಲಾಯಿಸಿರುವ ಬಗ್ಗೆ ಯತ್ನಾಳ್ ಹೆಚ್ಚು ಮಾತಾಡಲಿಲ್ಲ. ನಿರಾಣಿ ಮನೆಯಲ್ಲಿನ ಮದುವೆ ಕಾರ್ಯ್ರಮ ಮತ್ತು ಬಿಎಸ್ ಯಡಿಯೂರಪ್ಪನವರ ಮೊಮ್ಮಗನ ಮದುವೆ-ಎರಡಕ್ಕೂ ತಾನು ಹೋಗಲಿಲ್ಲ,
ಒಮ್ಮೆ ಮನಸ್ಸು ಮುರಿದುಕೊಂಡ ಮೇಲೆ ಮುಗೀತು, ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷರಾಗಬೇಕೆಂದು ತಾನು ಹೇಳೂದು ಇಲ್ಲ, ಒಂದು ವೇಳೆ ನಾನು ಹೇಳಿದ್ದೇಯಾದರೆ ಬಿಜೆಪಿ ನಾಯಕರು ಅವರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದರು.
Laxmi News 24×7