Breaking News

ಕೇಂದ್ರ ಸರ್ಕಾರ ಮಾಡುತ್ತಿರುವ ಜಾತಿಗಣತಿಗೂ ರಾಜ್ಯ ಸರ್ಕಾರ ಮಾಡುತ್ತಿರುವ ಸಮೀಕ್ಷೆಗೂ ವ್ಯತ್ಯಾಸವಿದೆ: ಸತೀಶ್ ಜಾರಕಿಹೊಳಿ

Spread the love

ರಾಯಚೂರು: ಕೇಂದ್ರ ಸರ್ಕಾರ ಕೇವಲ ಜನಗಣತಿ ಜೊತೆಗೆ ಜಾತಿಗಣತಿ ಮಾಡುತ್ತದೆ. ನಾವು ಶಿಕ್ಷಣ, ಸಾಮಾಜಿಕ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ವೆ ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಜಾತಿ ಒಂದು ಭಾಗವಷ್ಟೇ. 52 ಮಾನದಂಡದಲ್ಲಿ ಈ ಸಮೀಕ್ಷೆ ನಡೆಯುತ್ತೆ. ನಮ್ಮದು ಜಾತಿ ಸಮೀಕ್ಷೆ ಅಷ್ಟೇ ಅಲ್ಲ, ಸ್ಥಿತಿಗತಿ ಸಮೀಕ್ಷೆ ಆಗಿದೆ. ಆದಾಯ, ಉದ್ಯೋಗ, ಭೂಮಿ ಇದರ ಬಗ್ಗೆ ಕೇಂದ್ರ ಸಮೀಕ್ಷೆ ಮಾಡಲ್ಲ. ಅದಕ್ಕೂ ನಮ್ಮ ರಾಜ್ಯ ಸರ್ಕಾರ ಮಾಡುತ್ತಿರುವ ಸಮೀಕ್ಷೆಗೂ ವ್ಯತ್ಯಾಸವಿದೆ ಎಂದು ಹೇಳಿದರು.ಎಲ್ಲ ಸಮುದಾಯಗಳಿಂದ ಪ್ರಬಲ ವಿರೋಧ ಬಂತು. ನಮ್ಮವರು ಸಹ ವಿರೋಧವನ್ನು ವ್ಯಕ್ತಪಡಿಸಿದರು. 10 ವರ್ಷದ ನಂತರ ಸಮೀಕ್ಷೆಗೆ ವ್ಯಾಲಿಡಿಟಿ ಇಲ್ಲ. ಕೋರ್ಟ್​ನಲ್ಲಿ ಅದು ಸ್ಟ್ಯಾಂಡ್ ಆಗಲಿಕ್ಕಿಲ್ಲ ಅಂತ ಮರು ಸಮೀಕ್ಷೆಗೆ ಮುಂದಾಗಿದ್ದೇವೆ. ಮರುಸಮೀಕ್ಷೆಯಿಂದ ಹಣದ ವ್ಯಯ ವಿಚಾರ ಬರುವುದಿಲ್ಲ. ಕೋವಿಡ್ ಸಂದರ್ಭದಲ್ಲಿ 2-3 ಸಾವಿರ ಕೋಟಿ ಹೋಯ್ತು. ಬಿಜೆಪಿ ಸರ್ಕಾರದಲ್ಲಿ ಅನಾವಶ್ಯಕ ಎಷ್ಟೋ ಖರ್ಚು ಮಾಡಿದರು. ಇದು ರಾಜ್ಯದ ಜನರಿಗೋಸ್ಕರ ಮಾಡುತ್ತಿದ್ದೇವೆ. ಇಲ್ಲಿ ದುಡ್ಡಿನ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಸಮಾಧಾನ ಮಾಡಲು ಈ ಬಾರಿ ಸಮೀಕ್ಷೆಗೆ 300 ಕೋಟಿ ಆಗಬಹುದು ಎಂದು ಸಚಿವರು ತಿಳಿಸಿದರು.

ಸಂಪುಟ ವಿಸ್ತರಣೆ ಹೈಕಮಾಂಡ್​ಗೆ ಬಿಟ್ಟ ವಿಚಾರ: ಹೈಕಮಾಂಡ್ ಭೇಟಿ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಕೆಲವರು ವರಿಷ್ಠರನ್ನು ಭೇಟಿ ಮಾಡಿರಬಹುದು, ಮಾಡಿದ್ದಾರೆ ಕೂಡ. ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ಪಕ್ಷದ ಹೈಕಮಾಂಡ್​ಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆ ಆಗುತ್ತೊ ಈ ಎರಡೂ ಗೊತ್ತಿಲ್ಲ. ನಾವು ಮಂತ್ರಿ ಮಂಡಲದ ಭಾಗವಷ್ಟೇ. ನಾವು ಯಾರನ್ನೋ ತೆಗೆದು, ಯಾರನ್ನೋ ಹಾಕಲು ಹೋಗುತ್ತಿಲ್ಲ. ನಮ್ಮ ಸ್ಥಾನ ಉಳಿಸಿಕೊಳ್ಳುವುದೇ ನಮಗೆ ಸಾಕಾಗಿದೆ. ರಾಜಕೀಯ ನಿಂತ‌ ನೀರಲ್ಲ, ಹರಿಯುತ್ತಲಿರುತ್ತದೆ. ಹಾಗೆಯೇ ಸರ್ಕಾರದಲ್ಲಿ ಅಪ್ಸ್ ಅಂಡ್ ಡೌನ್ಸ್ ಇರುತ್ತೆ. ಎಲ್ಲಾ ಸರ್ಕಾರ ಇದ್ದಾಗ ನಡೆಯುತ್ತಲಿರುತ್ತದೆ. ಬಿಜೆಪಿ ಇದ್ದಾಗಲೂ ಮೂರು ಸಿಎಂ ಬದಲಾದರು. ಮಂತ್ರಿಮಂಡಲ ಬದಲಾಯಿತು. ನಮ್ಮಲ್ಲಿ ಈವರೆಗೆ ಯಾವುದೂ ಚೇಂಜ್​​ ಅಗಿಲ್ಲ. ಎರಡು ವರ್ಷ ಗಟ್ಟಿಯಾಗಿದೆ. ಮುಂದೆ ಗೊತ್ತಿಲ್ಲ. ಶಾಶ್ವತವಾಗಿರಲು ಆಗುತ್ತಾ? ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಬಗ್ಗೆ ಹೇಳಲು ಆಗಲ್ಲ. ಮಂತ್ರಿಮಂಡಲ ಬದಲಾದ್ರೂ ಆಗಬಹುದು. ಬಹಳ ಜನ ಸೀನಿಯರ್ಸ್ ಇದ್ದಾರೆ. ನಮಗೂ ಅವಕಾಶ ಕೊಡಿ‌ ಅಂತ ಕೇಳಿದ್ದಾರೆ. 5 ಬಾರಿ ಗೆದ್ದವರು ಇದ್ದಾರೆ, ಕೇಳುತ್ತಿದ್ದಾರೆ. ಮಂತ್ರಿ ಮಂಡಲ ಬದಲಾಗಬಹುದು. ಭವಿಷ್ಯತ್​ನಲ್ಲಿ ಲೀಡರ್​ಶಿಪ್ ಬೆಳೆಸಲು ಬಿಜೆಪಿಯವರು ಸ್ಟ್ರಾಟಜಿ ಮಾಡುತ್ತಾರೆ. ಫಸ್ಪ್ ಟೈಮ್ ಗೆದ್ದವರನ್ನ ಮುಖ್ಯಮಂತ್ರಿ ಮಾಡಿದರು. ನಿಮ್ಮ ರಾಯಚೂರಿನ ಒಬ್ಬರನ್ನು ಎಂಎಲ್​ಸಿ ಮಾಡಿದರು. ಆ ಮಾದರಿಯಲ್ಲಿ ನಮ್ಮಲ್ಲೂ ಆಗಬೇಕು. ಎಂಎಲ್​ಸಿಗಳನ್ನ ಸಚಿವರನ್ನ ಮಾಡುವ ವಿಚಾರ ನಾವು ಮಾತನಾಡಲು ಆಗಲ್ಲ ಎಂದರು.

ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರೆ. ಈಗ ಅವರೇ ಸಿಎಂ ಆಗಿದ್ದು, ಮುಂದೆಯೂ ಇರುತ್ತಾರೆ ಎಂಬ ಭಾವನೆ ಇದೆ ಎಂದರು.


Spread the love

About Laxminews 24x7

Check Also

ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಅದಲು ಬದಲಾದ ಆರೋಪ ಕೇಳಿಬಂದಿದೆ.

Spread the loveರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ