ವಿಜಯಪುರ, (ಜೂನ್ 14): ವಿಜಯಪುರ (Vijayapura) ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿಯಲ್ಲಿ (kyadgi Gram panchayat) ನರೇಗಾ (nrega) ಯೋಜನೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದ್ದು, ಶಾಲಾ ಮಕ್ಕಳನ್ನೇ ಕಾರ್ಮಿಕರು ಎಂದು ದಾಖಾತಿಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಹೌದು.. ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಶಾಲಾ ಮೈದಾನ ನಿರ್ಮಾಣ ಕಾಮಗಾರಿ ಫೋಟೋ ಅಪ್ ಲೋಡ್ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಫೋಟೋಗಳು ಇವೆ.
ಮಕ್ಕಳೇ ಕಾರ್ಮಿಕರೆಂದು ಬಿಂಬಿಸಿ ಕ್ಯಾಡಗಿ ಗ್ರಾಮ ಪಂಚಾಯತಿ ಪಿಡಿಓ ಬಿಲ್ ಪಾವತಿಸಿದ್ದಾರೆ. ಇದರ ಜೊತೆ ಇತರೆ ಬೇರೆ ಬೇರೆ ಕಾಮಗಾರಿಗಳಿಗೂ ಒಂದೇ ಫೋಟೋ ಎಡಿಟ್ ಮಾಡಿ ಬಿಲ್ ಎತ್ತಿರುವ ಆರೋಪ ಕೇಳಿಬಂದಿದೆ.ವಿಜಯಪುರ ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮೈದಾನ ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿ ನರೇಗಾ ಯೋಜನೆಯಲ್ಲಿ ಕೂಲಿಕಾರ್ಮಿಕರನ್ನು ಬಳಕೆ ಮಾಡಿಕೊಂಡು ಮೈದಾನ ಮಾಡಲಾಗಿದೆ ಎಂದು ನಮೂದಿಸಲಾಗಿದೆ.
ಆದರೆ ಯಾವುದೇ ಕಾಮಗಾರಿ ಮುಕ್ತಾಯವಾದರೂ ಅಲ್ಲಿ ಕೆಲಸ ಮಾಡಿದ ಕಾರ್ಮಿಕರು ಇದ್ದ ಫೋಟೋಗಳನ್ನು ನಿಯಮಗಳ ಪ್ರಕಾರ ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕು. ನಂತರವಷ್ಟೇ ಅಧಿಕೃತಗೊಂಡ ನಂತರ ಕೂಲಿಯ ಹಣ ನೀಡಲಾಗುತ್ತದೆ. ಆದ್ರೆ, ನಾಗರಹಳ್ಳಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮೈದಾನ ನಿರ್ಮಾಣ ಕಾಮಗಾರಿ ಮುಗಿದಿದೆ ಎಂದು ಅದೇ ಶಾಲೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳೇ ಕೂಲಿ ಕಾರ್ಮಿಕರು ಎಂದು ಫೋಟೋ ತೆಗೆದು ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲಾಗಿದೆ.