ಸಿಎಂ ಸಿದ್ದರಾಮಯ್ಯ ಬರೀ ಗಿಮಿಕ್ ಮಾಡ್ತಾರೆ: ಸಂಸದ ಗೋವಿಂದ ಕಾರಜೋಳ
ಸಿಎಂ ಸಿದ್ದರಾಮಯ್ಯ ಬರೀ ಗಿಮಿಕ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ತರಹದ ದುರುದ್ದೇಶ ಜಾತಿಗಣತಿ ನಮ್ಮದು ಅಲ್ಲಾ, ಸಿಎಂ ಸಿದ್ದರಾಮಯ್ಯ 2013ರಿಂದ 2018ರ ವರೆಗೂ ಸಿಎಂ ಆಗಿದ್ದರು.
ಆ ವೇಳೆ ಜಾತಿ ಗಣತಿ ಒಪ್ಪಲಿಲ್ಲಾ, ಇದೀಗ್ ಎರಡು ವರ್ಷ ಆಯ್ತು ಜಾತಿ ಗಣತಿ ಒಪ್ಪಿಲ್ಲಾ, ಅಧಿಕಾರಕ್ಕೆ ಬಂದ ಕೂಡಲೆ ಒಳಮೀಸಲಾತಿ ಜಾರಿಗೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆದ್ರೇ, ಅದನ್ನು ಕುರ್ಚಿ ಕೆಳಗೆ ಇಟ್ಟುಕೊಂಡು ಕುಳಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೇ ಗಿಮಿಕ್ ಇಲ್ಲ, ನಮ್ದು ಪ್ರಾಮಾಣಿಕತೆ ಇದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಯಾವುದೇ ಕೆಲಸ ಮಾಡಿದ್ರೂ ಅದರಲ್ಲಿ ಪ್ರಾಮಾಣಿಕತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡ ವಿಜುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.