ಹುಕ್ಕೇರಿ : ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ದರಾಗಿ – ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ ತಾಲೂಕಿನಲ್ಲಿ ಮಳೆ ಚನ್ನಾಗಿ ಆಗಿದ್ದರಿಂದ ರೈತರು ಜಮೀನುಗಳನ್ನು ಹದ ಮಾಡಿದ್ದರ ಹಿನ್ನಲೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಬಿಜ ವಿತರಣಾ ಕಾರ್ಯಕ್ರಮ ಜರುಗಿತು.
ಹುಕ್ಕೇರಿ ಕೃಷಿ ಇಲಾಖೆ ಆವರಣದಲ್ಲಿ ಜರುಗಿದಚಸರಳ ಸಮಾರಂಭದಲ್ಲಿ ಶಾಸಕ ನಿಖಿಲ್ ಕತ್ತಿ ಬೀಜಗಳಿಗೆ ಪೂಜೆ ಸಲ್ಲಿಸಿ ರೈತರಿಗೆ ಸೋಯಾಬೀನ, ಗೋವಿನ ಜೋಳ ಮತ್ತು ಹೆಸರು ಕಾಳುಗಳನ್ನು ವಿತರಣೆ ಮಾಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಈ ವರ್ಷ ಮುಂಗಾರು ಮಳೆ ಅವದಿಕ್ಕಿಂತ ಮುಂಚಿತವಾಗಿ ಪ್ರಾರಂಭ ವಾಗಿದ್ದ ರಿಂದ ರೈತರಿಗೆ ಬಿತ್ತನೆ ಬೀಜಗಳನ್ನು ತಾಲೂಕಿನ ಪ್ರಾಥಮಿಕ ಸಹಕಾರಿ ಸಂಘ ಮತ್ತು ರೈತ ಸಂಪರ್ಕ ಕೇಂದ್ರಗಳಿಂದ ವಿತರಿಸಲಾಗುತ್ತಿದ್ದು ರೈತರು ಬೀಜ ಪಡೆದು ಬಿತ್ತನೆ ಮಾಡಿ ಒಳ್ಳೆಯ ಫಸಲು ಪಡೆಯಬೇಕು ಎಂದರು
ನಂತರ ಕೃಷಿ ಇಲಾಖೆಯ ಬಿತ್ತಿ ಪತ್ರ ಬಿಡುಗಡೆ ಗೊಳಿಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೆಶಕ ರಾಮಚಂದ್ರ ನಾಯ್ಕರ ಮಾತನಾಡಿ ರೈತರು ಅಧಿಕೃತ ಖಾಸಗಿ ಮಳಿಗೆಗಳಲ್ಲಿ ಕಿಟನಾಶಕ,ಬೀಜ ಗಳನ್ನು ಮಾತ್ರ ಖರಿದಿಸಬೇಕು ಮತ್ತು ಖರೀದಿ ನಂತರ ಪಾವತಿ ಪಡೆಯಬೇಕು ,ಯಾವದೇ ಮಾರಾಟಗಾರರು ಕಳಪೆ ಬೀಜ ಮಾರಾಟ ಮಾಡುವದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವದು ಎಂದರು
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಸಮೀರ ಲೋಕಾಪುರ, ಶಿವಾನಂದ ಕಾಮತ, ಶ್ರದ್ದಾ ಪಾಟೀಲ, ಕಾದಂಬರಿ ಪಾಟೀಲ, ಉದಯಕುಮಾರ ಆಗನೂರೆ, ಬಸವರಾಜ ರಾಯವಗೋಳ, ಪುರುಷೋತ್ತಮ ಪೀರಾಜೆ ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರಾದ ಸತ್ಯಪ್ಪಾ ನಾಯಿಕ, ಗುರು ಕುಲಕರ್ಣಿ, ಎ ಕೆ ಪಾಟೀಲ, ಶಿವನಗೌಡ ಪಾಟೀಲ, ಶೀಥಲ ಬ್ಯಾಳಿ, ಚನ್ನಪ್ಪ ಗಜಬರ, ಬಿ ಕೆ ಮಗೆನ್ನವರ ,ಆನಂದ ಲಕ್ಕುಂಡಿ, ಎಚ್ ಎಲ್ ಪೂಜೇರಿ, ಹಾಗೂ ರೈತರು ಉಪಸ್ಥಿತರಿದ್ದರು.