Breaking News

ವಿದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರ ಬಳಿ 3 ಸಾವಿರಕ್ಕೂ ಹೆಚ್ಚು ಆಮೆ, ಉಡ ಪತ್ತೆ!

Spread the love

ಬೆಂಗಳೂರು, ಮೇ 27: ವಿಚಿತ್ರ ಪ್ರಕರಣವೊಂದರಲ್ಲಿ, ವಿದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bengaluru Airport) ಬಂದ ಪ್ರಯಾಣಿಕರ ಬಳಿ 3 ಸಾವಿರಕ್ಕೂ ಹೆಚ್ಚು ಆಮೆ (Turtles), ಉಡ, ಆಫ್ರಿಕನ್ ಆಮೆಗಳು ಪತ್ತೆಯಾಗಿವೆ. ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಶಂಕಿತ ವನ್ಯಜೀವಿ ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಥಾಯ್ ಏರ್‌ವೇಸ್‌ ವಿಮಾನದಲ್ಲಿ ಥಾಯ್ಲೆಂಡ್​​ನಿಂದ ಶನಿವಾರ ಬೆಳಿಗ್ಗೆ 11.17 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಲಸುಬ್ರಮಣಿಯನ್ ಷಣ್ಮುಗಂ, ವಿಜಯರಾಘವನ್ ಧನಪಾಲ್ ಹಾಗೂ ಭಾನುವಾರ ಮಲೇಷ್ಯಾದಿಂದ ಬಂದ ಅರುಣ್‌ಕುಮಾರ್ ನಾರಾಯಣಸ್ವಾಮಿ ಎಂಬವರ ಬಳಿಯಿಂದ ಆಮೆ, ಉಡ, ಆಫ್ರಿಕನ್ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಕ್ಕೆ ಪಡೆಯಲಾದ ಮೂವರು ಪ್ರಯಾಣಿಕರ ಬಳಿ, ವನ್ಯಜೀವಿಗಳನ್ನು ತೆಗೆದುಕೊಂಡು ವಿದೇಶ ಪ್ರಯಾಣ ಮಾಡಲು ಅಗತ್ಯವಾದ ಅಧಿಕೃತ ದಾಖಲೆಗಳು ಇರಲಿಲ್ಲ. ಹಿಗಾಗಿ ಅವರ ಬಳಿ ಇದ್ದ ಪ್ರಾಣಿಗಳನ್ನು ವಶಪಡಿಸಿಕೊಂಡು ಭಾನುವಾರ ಅವುಗಳ ಮೂಲ ದೇಶಗಳಾದ ಮಲೇಷ್ಯಾ ಮತ್ತು ಥಾಯ್ಲೆಂಡ್​ಗೆ ಕಳುಹಿಸಿಕೊಡಲಾಗಿದೆ. ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ತಿಂಗಳುಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವನ್ಯಜೀವಿ ಕಳ್ಳಸಾಗಣೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗಿವೆ. ಆದರೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವನ್ಯಜೀವಿ ಕಳ್ಳಸಾಗಣೆ ಪ್ರಕರಣ ಕಡಿಮೆಯಾಗಿವೆ. ಮರಿ ಪ್ರಾಣಿಗಳನ್ನೇ ಹೆಚ್ಚಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲದೆ ಕಳ್ಳಸಾಗಣೆ ಮಾಡುವುದಕ್ಕಾಗಿ ಆ ಪ್ರಾಣಿಗಳಿಗೆ ಕಡಿಮೆ ಡೋಸ್​​ನ ನಿದ್ರಾ ಔಷಧ ನೀಡಲಾಗುತ್ತದೆ ಎಂದು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಲೇಷ್ಯಾದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುವ ಕೆಂಪು ಕಿವಿಯ ಆಮೆಗಳು ಬಹಳ ಬೇಗ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡಲಾಗುವ ಪ್ರಬೇಧಗಳಲ್ಲಿ ಒಂದಾಗಿವೆ. ಕಳೆದ ವಾರವಷ್ಟೇ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3,000 ಆಮೆಗಳನ್ನು ವಶಪಡಿಸಿಕೊಳ್ಳಲಾಗಿತ್ತು


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ