ಬೆಳಗಾವಿ : ರಾಜ್ಯ ಪೊಲೀಸ್ ಇಲಾಖೆಯಿಂದ
ಕೊಡಮಾಡುವ ಡಿಜಿ ಮತ್ತು ಐಜಿಪಿ ಪ್ರಶಸ್ತಿಗೆ ಬೆಳಗಾವಿಯ ಒಂಬತ್ತು ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋರ್, ನಗರ ಪೊಲೀಸ್ ಆಯುಕ್ತ, ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಶ್ರುತಿ ಎನ್.ಎಸ್, ಬೆಳಗಾವಿ ನಗರ ಸಿಇಎನ್ ಠಾಣೆ ಸಿಪಿಐ ಬಿ.ಆರ್ ಗಡ್ಡೆಕರ್, ನಿಪ್ಪಾಣಿ ಠಾಣೆ ಸಿಪಿಐ ಬಾಳಪ್ಪ ತಳವಾರ.
ಕೆಎಸ್‌ಆರ್ಪಿ ಸ್ಪೆಷಲ್ ಆರ್ಪಿಐ ಪಂದಪ್ಪ ಗಿರಡ್ಡಿ, ಪಿಟಿಎಸ್ ಕಂಗ್ರಾಳಿ ಸ್ಪೆಷಲ್ ಆರ್ ಹೆಚ್ ಸಿ ಬಸಪ್ಪ ತೋಟದ, ಬೆಳಗಾವಿ ಡಿಪಿಒ ಅಪರಾಧ ವಿಭಾಗದ ಪೇದೆ ಶ್ರೀಶೈಲ ಬಳಿಗಾರ ಹಾಗೂ ಕೆಎಸ್‌ಆರ್ಪಿ WRHC ಅಶ್ವಿನಿ ಮೂಲಿಮನಿ ಪದಕ ಪಡೆದಿದ್ದಾರೆ.
ಪೊಲೀಸ್ ಇಲಾಖೆ 2024-25ರ ಸೇವೆಯನ್ನು ಪರಿಗಣಿಸಿ ಈ ಮೆಡಲ್ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಇದೇ ಮೇ.21ರಂದು ಪದಕ ನೀಡಿ ಗೌರವಿಸಲಾಗುತ್ತದೆ.