Breaking News

ಸಚಿವ ಸಂಪುಟ ವಿಸ್ತರಣೆ ವಿಚಾರ ಆದಾಗ ನೋಡೋಣ ಎಂದ ಸತೀಶ ಜಾರಕಿಹೊಳಿ

Spread the love

ಡಿಸೆಂಬರ್ ನಲ್ಲಿ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ವಿಚಾರ
ಡಿಸೆಂಬರ್ ಇನ್ನೂ ಬಹಳ ದೂರವಿದೆ, ಆದಾಗ ನೋಡೋಣ ಎಂದ ಸತೀಶ
ಸಚಿವ ಸಂಪುಟದ ವಿಸ್ತರಣೆಯನ್ನ ಹೈಕಮಾಂಡ್ ಮಾಡಬೇಕು, ನಮಗೇನು ಅದರ ಬಗ್ಗೆ ಗೊತ್ತಿಲ್ಲ
ಹಿರಿಯ ಶಾಸಕರು ಮಂತ್ರಿ ಆಗಬೇಕೆಂದು ಆಕಾಂಕ್ಷಿ ವ್ಯಕ್ತಪಡಿಸಿದ ವಿಚಾರ
30ತಿಂಗಳ ನಂತರ ನಾವು ಮಂತ್ರಿಗಳು ಆಗಬೇಕೆಂದು ಬಹಳಷ್ಟು ಶಾಸಕರ ಒತ್ತಾಸೆ ಇದೆ
ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು,ಎಲ್ಲರಿಗೂ ಅವಕಾಶ ಸಿಗುತ್ತದೆ
ಇದನ್ನ ನಿರ್ಧಾರ ಮಾಡೋ ಹೈಕಮಾಂಡ್, ನಮ್ಮ‌ಮಟ್ಟದಲ್ಲಿ ಇಲ್ಲ
ಸಚಿವರ ಕಾರ್ಯವೈಖರಿಗಳ ಬಗ್ಗೆ ಚರ್ಚೆ ಆಗಿದ್ಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ
ಚರ್ಚೆ ಏನು ಆಗಿಲ್ಲ, ವಿಸ್ತರಣೆಯಾದರೆ ಹೊಸ ಲೀಡರ್ ಶಿಪ್ ಬೆಳೆಯುತ್ತೆ ಎಂದ ಸತೀಶ ಜಾರಕಿಹೊಳಿ
ಪರೋಕ್ಷವಾಗಿ ಸಚಿವ ಸಂಪುಟ ವಿಸ್ತರಣೆಗೆ ಬೆಂಬಲ ಸೂಚಿಸಿದ ಸತೀಶ ಜಾರಕಿಹೊಳಿ
ಎರಡು ವರ್ಷದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಿಜೆಪಿ ವಿರೋಧ ವಿಚಾರ
ನಾವು ಅವರ ಸಾಧನೆ ಬಗ್ಗೆ ಹೇಳುತ್ತಿಲ್ಲ, ನಮ್ಮ ಸಾಧನೆ ಹೇಳುತ್ತಿದ್ದೇವೆ
ನಮ್ಮ ಸರ್ಕಾರದ ಸಾಧನೆ ಮಾಡಿದ್ರೆ ಅವರಿಗೇನು ಸಮಸ್ಯೆ ಎಂದು ಬಿಜೆಪಿಗೆ ಸತೀಶ ಪ್ರಶ್ನೆ
ಅವರು ಮಾಡಲಿ ಅವರಿಗೆ ಯಾರು ಬೇಡ ಅಂದೋರು ಎಂದ ಸತೀಶ
ಬಿಜೆಪಿ ಹನ್ನೂಂದು ವರ್ಷದ ಸಾಧನೆ ಬಗ್ಗೆ ಹೇಳಲಿ,ನಾವು ಎರಡು ವರ್ಷದ ಸಾಧನೆ ಹೇಳುತ್ತಿದ್ದೇವೆ
ರೈತರ ಸಮಾಧಿ ಮೇಲೆ ಕಾಂಗ್ರೆಸ್ ಸಮಾವೇಶ ಮಾಡ್ತಿದೆ ಎಂಬ ಆರ್‌.ಅಶೋಕ ಆರೋಪ ವಿಚಾರ
ಅವರು ಹಾಗೇಯೆ ಹೇಳೋರು, ಬಿಜೆಪಿ ಸರ್ಕಾರದಲ್ಲಿಯೂ ಇಂತಹ ಘಟನೆಗಳು ಆಗಿವೆ
ನಾವು ಸಾಧನೆ ಬಗ್ಗೆ ಹೇಳಲು ಹೊರಟಿದ್ದೇವೆ, ಫೆಲ್ಯೂವರ್ ಬಗ್ಗೆ ಅಲ್ಲ
ಎರಡು ವರ್ಷಗಳ ನಂತರ ಗ್ಯಾರಂಟಿ ಬಂದ್ ಆಗುತ್ತಾವೆ ಎಂಬ ಚರ್ಚೆ ವಿಚಾರ
ಬಿಜೆಪಿಯವರು ಡೇ ಒನ್ ದಿಂದ ಗ್ಯಾರೆಂಟಿ ಬಂದ್ ಆಗುತ್ತವೆ ಅಂತಾ ಹೇಳುತ್ತಿದ್ದಾರೆ
ಇದು ಎರಡು ವರ್ಷದಿಂದ ನಡೆಯುತ್ತಾನೆ ಇದೆ, ಇನ್ನೂ ಮೂರು ವರ್ಷ ಹೀಗೆ ನಡೆಯುತ್ತೆ ಎಂದ‌ ಸತೀಶ
ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಬಿಜೆಪಿ ಆರೋಪ ವಿಚಾರ
ಸರ್ಕಾರ ನಡೆದಿದೆ, ಸುಳ್ಳು ಹೇಳುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ
ಭಾರತೀಯ ಸೇನೆ ಯೋಧರ ಬಗ್ಗೆ ಬೇರೆ ಬೇರೆ ರಾಜ್ಯದ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ ವಿಚಾರ
ಯಾರು ಹೇಳಿದ್ದಾರೆ,ಯಾಕೆ ಹೇಳಿದ್ದಾರೆಂದು ಅವರನ್ನೇ ಕೇಳಬೇಕು
ನಾವೆಲ್ಲ ದೇಶದ ಸೈನಿಕರ ಬಗ್ಗೆ ವಿಶ್ವಾಸವನ್ನು ಇಡಬೇಕು
ಕೊತ್ತೂರು ಮಂಜುನಾಥ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ,ಸರ್ಕಾರದ ಅಭಿಪ್ರಾಯವಲ್ಲ
ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಇರಬೇಕು
ನಮ್ಮ ಪಕ್ಷ ಕೂಡ ನಮ್ಮ‌ಸಂದೇಶ ಕಳುಹಿಸಿದೆ, ನಾವು ಕೇಂದ್ರ ಸರ್ಕಾರದ ಜತೆಗೆ ಇರುತ್ತೇವೆ ಎಂದ ಸತೀಶ ಜಾರಕಿಹೊಳಿ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ
ನೀವು ಬೆಂಗಳೂರಿನಲ್ಲಿಯೇ ಕೇಳಬೇಕು ಎಂದ ಸತೀಶ ಜಾರಕಿಹೊಳಿ

Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ