ವಿಜಯಪುರ, ಮೇ 12: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ,
ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ, ಅದರ ಅವಶ್ಯಕತೆಯೇ ನನಗಿಲ್ಲ, ಯಾಕೆಂದರೆ ದೆಹಲಿ ವರಿಷ್ಠರೆಲ್ಲ (party seniors) ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ
ಎಂದು ಯತ್ನಾಳ್ ಹೇಳಿದರು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿ ನಂತರ ದೆಹಲಿಯ ಬಿಜೆಪಿ ನಾಯಕರೆಲ್ಲ, ಭಯೋತ್ಪಾದಕರನ್ನು ಹತ್ತಿಕ್ಕುವ, ಪಾಕಿಸ್ತಾನಕ್ಕೆ ಪಾಠ ಕಲಿಸುವ, ಅಪರೇಷನ್ ಸಿಂಧೂರ, ಯುದ್ಧ, ಕದನ ವಿರಾಮದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.
ಯಾವುದೇ ನಾಯಕನಿಗೆ ತನ್ನ ಕುಟುಂಬದ ಜೊತೆ ಮಾತಾಡುವಷ್ಟೂ ವ್ಯವಧಾನವಿಲ್ಲ. ಪರಿಸ್ಥಿತಿ ಹಾಗಿರುವಾಗ ಯತ್ನಾಳ್ ಪಕ್ಷದ ವರಿಷ್ಠರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ. ಹಿಂದೆ ಈಶ್ವರಪ್ಪ ಸಹ ಹೀಗೆಯೇ ಹೇಳುತ್ತಿದ್ದರು!
Laxmi News 24×7